ಚಿಕ್ಕಮಗಳೂರು : ಕನ್ನಡಿಗೊಬ್ಬರು ಪ್ರಧಾನಿಯಾಗುತ್ತಾರೆಂಬ ಸಿಎಂ ಹೇಳಿಕೆಗೆ ಸಂಬಂಧಿಸಿದಂತೆ ಕಡೂರಿನಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಈಗ ಕನ್ನಡಿಗರೊಬ್ಬರು ಪ್ರಧಾನಿ ಹೇಳಿಕೆ ಸರಿಯಲ್ಲ. ನಾನು ಪ್ರಧಾನಿಯಾದಾಗ ಪರಿಸ್ಥಿತಿ ಬೇರೆ ಇತ್ತು. ಆಗ ಜೆಡಿಎಸ್ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡಿತ್ತು. ಈಗ ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ಮಾಡುತ್ತಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಎಡ ಪಕ್ಷಗಳು ಒಂದಾಗಿವೆ. ರಾಹುಲ್ ಗಾಂಧಿ ಪ್ರಧಾನಿ ಎಂಬ ಚರ್ಚೆ ಆಗುತ್ತಿದೆ, ಇದಕ್ಕೆ ಎಡ ಪಕ್ಷಗಳ ಸಹಮತ ಬೇಕಾಗುತ್ತದೆ ಎಂದಿದ್ದಾರೆ.