ತಿರುವನಂತಪುರಂ: ಅಯ್ಯಪ್ಪನ ದರ್ಶನ ಪಡೆಯಲು ಸುಮಾರು 300 ಪೊಲೀಸ್ ಬಿಗಿಭದ್ರತೆಯಲ್ಲಿ ತೆರಳುತ್ತಿದ್ದ ಇಬ್ಬರು ಮಹಿಳೆಯರು ಭಾರೀ ವಿರೋಧ ಹಾಗೂ ಗಲಾಟೆ ಕಾರಣದಿಂದ ಅಯ್ಯಪ್ಪನ ದರ್ಶನ ಸಿಗದೇ ವಾಪಾಸ್ಸಾಗಿದ್ದು, ಪ್ರತಿಭಟನಾಕಾರರ ಉಗ್ರ ಹೋರಾಟದ ನಡುವೆಯೂ ದೇಗುಲ ಪ್ರವೇಶಿಲು ಮುಂದಾಗಿದ್ದ ಆಂಧ್ರ ಪ್ರದೇಶ ಮೂಲದ ಪತ್ರಕರ್ತೆ ಕವಿತಾ ಜಕ್ಕಲ್ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಇಬ್ಬರಿಗೂ ನಿರಾಸೆ ಮೂಡಿದ್ದು, ಹೆಲ್ಮೆಟ್ ಹಾಗೂ ಸಮವಸ್ತ್ರ ಧರಿಸಿ ಭಾರೀ ಭದ್ರತೆಯ ಮೂಲಕ ದೇವಾಲಯದತ್ತ ತೆರಳಿದ್ದರು. ಪಂಪಾ ದಾಟುತ್ತಿದ್ದಂತೆಯೇ ಪ್ರತಿಭಟನೆ ತೀವ್ರಗೊಂಡಿದ್ದು, ಮಹಿಳೆಯರು ಪ್ರವೇಶಿಸಿದರೆ ಪೂಜೆಯನ್ನು ನಿಲ್ಲಿಸಿ ದೇಗುಲದ ಬಾಗಿಲು ಮುಚ್ಚುವುದಾಗಿ ಅರ್ಚಕರು ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೇಯಲ್ಲಿ ಇಬ್ಬರು ಮಹಿಳೆಯರು ವಾಪಸ್ಸಾಗಿದ್ದಾರೆ.










