ರಾಣೆಬೆನ್ನೂರು : ಎರಡು ವರ್ಷದ ಮಗುವಿನ ಮೇಲೆ ಯುವಕ ಅತ್ಯಾಚಾರ ಎಸಗಿರುವ ಘಟನೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ. ಆರೋಪಿ ಕಾಮುಕನನ್ನು ಚೆನ್ನಪ್ಪ ಎಮ್ಮೇರ ಎಂದು ಗುರುತಿಸಲಾಗಿದೆ. ಮಗುವಿನ ಪೋಷಕರು ಮಗಳನ್ನು ಸ್ವಲ್ಪ ಸಮಯ ನೋಡಿಕೊಳ್ಳುವಂತೆ ಹೇಳಿ ತಮ್ಮ ಜಮೀನಿನ ಕೆಲಸಕ್ಕೆಂದು ತೆರಳಿದ್ದು, ಈ ವೇಳೆ ಆರೋಪಿ ಚೆನ್ನಪ್ಪ ಎಮ್ಮೇರ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದು, ಈ ಘಟನೆಯಿಂದ ತೀವ್ರ ಅಸ್ವಸ್ಥವಾಗಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಗುವಿನ ಪೋಷಕರು ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.










