ಯಡಿಯೂರಪ್ಪ ಅವರು ವಯಸ್ಸಿಗೆ ತಕ್ಕ ಹಾಗೆ ಮಾತಾಡಲಿ.-ಮುಖ್ಯಮಂತ್ರಿ ಕುಮಾರಸ್ವಾಮಿ…

376
firstsuddi

ಬೆಂಗಳೂರು :ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪರ್ಸಂಟೇಜ್ ಸಿಸ್ಟಂನ ಜನಕ ಯಡಿಯೂರಪ್ಪ. ಅವರು ವಯಸ್ಸಿಗೆ ತಕ್ಕ ಹಾಗೆ ಮಾತಾಡಲಿ.ಅವರ ಮಾತಿನಲ್ಲಿ ಗಾಂಭೀರ್ಯ ಮತ್ತು ಹಿಡಿತ ಇರಲಿ. ನಮ್ಮನ್ನ ಜೈಲಿಗೆ ಕಳಿಸುತ್ತೀನಿ ಎಂದು ಅವರೇ ಜೈಲಿಗೆ ಹೋಗಿದ್ದರು. ಇಂದು ಡಿ.ಕೆ ಶಿವಕುಮಾರ್‍ ರನ್ನು  ಜೈಲಿಗೆ ಕಳುಹಿಸುತ್ತೀವಿ ಅಂತಾ ಹೇಳಿಕೆ ನೀಡುತಿದ್ದಾರೆ. ನಾವು ಅಧಿಕಾರ ಇದ್ದಾಗ ರಾಜ್ಯದ ಸಂಪತ್ತು ಉಳಿಸಲು ಯತ್ನಿಸಿದವರು. ಸರ್ಕಾರ ನನ್ನ ಕೈಯಲ್ಲಿ ಇದೆ ಏನು ಮಾಡಬೇಕು ಎಂದು ಗೊತ್ತಿದೆ. ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಿ. ನಾಗಮಂಗಲ ಶಾಸಕ ಸುರೇಶ್ ಗೌಡರಿಗೆ ನೀವು ಬನ್ನಿ ಎಂದು ಕರೆದಿದ್ದಾರೆ. ಶಾಸಕ ಶಿವಳ್ಳಿಗೂ ಸಹ ಫೋನ್ ಮಾಡಿ ಬರಲು ಹೇಳುತ್ತಿದ್ದಾರೆ. ಮುಂಬಯಿಯಿಂದ ಶಾಸಕರನ್ನು ಮಿಲಿಟರಿ ಫೋರ್ಸ್ ಜೊತೆ ವಿಧಾನಸೌಧಕ್ಕೆ ಕರೆದುಕೊಂಡು ಬರುತ್ತಾರಂತೆ. ದೇವೇಗೌಡರ ಕುಟುಂಬದ ಬಗ್ಗೆ ಚರ್ಚೆ ಮಾಡುವುದನ್ನು ನಿಲ್ಲಿಸಿ, ನಾವೇನು ಲೂಟಿಕೋರರಾ, ರಾಜ್ಯವನ್ನು ಲೂಟಿ ಹೊಡೆದವರು ನೀವು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಡಿಯೂರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.