ಬೆಂಗಳೂರು- ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಇದು ಕೇವಲ ಅಣ್ಣ ತಮ್ಮಂದಿರ ಬಜೆಟ್ ಎಂದು ಬಿ.ಎಸ್ ಯಡಿಯೂರಪ್ಪ ಟೀಕೆ ಮಾಡಿದ್ದು ಕರಾವಳಿ, ಮಲೆನಾಡು,ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿ ಹಾಸನ ಮತ್ತು ಹಳೇ ಮೈಸೂರು ಭಾಗಗಳಿಗೆ ಮಾತ್ರ ಈ ಅನುದಾನ ಕೊಡಲೆಂದು ಈ ಬಜೆಟ್ ಮಾಡಿರುವುದು ಎಂದು ಯಡಿಯೂರಪ್ಪ ಅಸಮಧಾನ ವ್ಯಕ್ತಪಡಿಸಿದರು.