ಚಿಕ್ಕಮಗಳೂರು : ಬಿಜೆಪಿಯವರು ಅತ್ಯಂತ ಮಾನಗೆಟ್ಟ ಹಾಗೂ ಲಜ್ಜೆಗೆಟ್ಟವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೀರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯವರಗೆ ಮಾನ ಮರ್ಯಾದೆ ಇಲ್ಲ. ಸಿಎಂ ಆಗೋ ಆಸೇ ಯಡಿಯೂರಪ್ಪಗೆ ಇನ್ನೂ ಹೋಗಿಲ್ಲ. ಬಿಜೆಪಿಯವರು ಮಾಧ್ಯಮದವರಿಗೆ ಬರಿ ಸುಳ್ಳು ಹೇಳುತ್ತಿದ್ದಾರೆ. ಜನರು ಅವರಿಗೊಂದು ಮ್ಯಾನ್ ಡೇಟ್ ಕೊಟ್ಟಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು ಎಂದು. ಆದರೆ ಬಿಜೆಪಿಯವರಿಗೆ ಅಧಿಕಾರ ಮಾಡಿ ಅಂತ ತೀರ್ಪು ಕೊಟ್ಟಿಲ್ಲ. ಕಳೆದ ಆರು ತಿಂಗಳಿಂದ ಸರ್ಕಾರ ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪನಿಗೆ 77 ವರ್ಷ ವಯಸ್ಸಾಗಿದೆ ಹೊರತು ಬುದ್ಧಿ ಬಂದಿಲ್ಲ. ಇನ್ನೂ ಸಿಎಂ ಆಗಬೇಕೆಂಬ ವಾಮ ಮಾರ್ಗ ಹಿಡಿದಿದ್ದಾರೆ.ಕೋಟ್ಯಾಂತರ ರೂಪಾಯಿ ಎಂಎಲ್ಎ ಗಳಿಗೆ ಆಫರ್ ಮಾಡುತ್ತಿದ್ದಾರೆ.ಇದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಮಾರಕ.ಬಿಜೆಪಿಯವರಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ.ಪದೇ ಪದೇ ಸರ್ಕಾರ ಬೀಳಿಸಲು ಪ್ರಯತ್ನ ಮಾಡುತ್ತಲೇ ಇದ್ದಾರೆ.ಬಿಜೆಪಿಯವರು ಎಷ್ಟು ಲಜ್ಜೆಗೆಟ್ಟವರು ಎಂದರೆ ಹರಿಯಾಣದಲ್ಲಿ ಎಲ್ಲರನ್ನೂ ಕೂಡಿಟ್ಟು ಕೊಂಡಿದ್ದಾರೆ.ಸಂಕ್ರಾಂತಿ ಗಿಫ್ಟ್ ಕೊಡ್ತೀವಿ ಯುಗಾದಿ ಗಿಫ್ಟ್ ಕೊಡ್ತೀನಿ ಅಂತ ಬರೀ ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.









