ಅಂಗಾಂಗ ದಾನ ಮಾಡಲು ಮುಂದಾದ ನಟ ವಿಜಯ್ ದೇವರಕೊಂಡ.

60
firstsuddi

ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ‘ಲೈಗರ್’ ಹೀರೋ ಈ ಬಗ್ಗೆ ಮಾತನಾಡಿದ್ದಾರೆ. ದಾನಿಗಳ ಕಾರಣದಿಂದಲೇ ಅನೇಕ ಸರ್ಜರಿಗಳು ಆಗುತ್ತಿವೆ ಎಂದು ನನಗೆ ವೈದ್ಯರು ಹೇಳಿದರು. ಸಾಕಷ್ಟು ಜನರು ಅಂಗಾಂಗ ದಾನ ಮಾಡುತ್ತಿದ್ದಾರೆ. ಅದು ಉತ್ತಮ ಕಾರ್ಯ. ಹಾಗಿದ್ದರೂ ಕೂಡ ದಾನಿಗಳ ಸಂಖ್ಯೆ ಕಡಿಮೆ ಇದೆ. ನಾನು ನನ್ನ ಎಲ್ಲ ಅಂಗಾಂಗಗಳನ್ನು ದಾನ ಮಾಡುತ್ತೇನೆ.

ನನ್ನ ಬದುಕು ಅಂತ್ಯವಾದ ಬಳಿಕ ಇನ್ನೊಬ್ಬರ ಬದುಕಿನ ಭಾಗವಾಗಲು ಖುಷಿ ಎನಿಸುತ್ತದೆ. ಅಂಗಾಂಗಗಳನ್ನು ವ್ಯರ್ಥ ಮಾಡುವುದರಲ್ಲಿ ಯಾವುದೇ ಉಪಯೋಗ ಇಲ್ಲ. ಅಂಗಾಂಗ ದಾನದ ಬಗ್ಗೆ ಎಲ್ಲರೂ ಆಲೋಚನೆ ಮಾಡಬೇಕು ಅಂತ ನಾನು ಬಯಸುತ್ತೇನೆ ಎಂದಿದ್ದಾರೆ ವಿಜಯ್ ದೇವರಕೊಂಡ. ಇವರ ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮಗನ ಈ ಕಾರ್ಯವನ್ನು ಶ್ಲ್ಯಾಘಿಸಿರುವ ಅವರ ತಾಯಿ ಮಾಧವಿ ಕೂಡ ತಮ್ಮ ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ. ಅವರು ಕೂಡ ಅಂಗಾಂಗ ದಾನಕ್ಕಾಗಿ ನೋಂದಣಿ ಮಾಡಿಸಿದ್ದಾರೆ.