ಅಗ್ನಿಪಥ್ ಯೋಜನೆ – 7.5 ಲಕ್ಷ ಅರ್ಜಿಗಳು ಸಲ್ಲಿಕೆ…

59
firstsuddi

ನವದೆಹಲಿ : ಅಗ್ನಿಪಥ್ ನೇಮಕಾತಿ ಯೋಜನೆಯಡಿ ಈ ಬಾರಿ 7,49,899 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದು ದಾಖಲೆಯನ್ನೇ ನಿರ್ಮಿಸಿದೆ ಎಂದು ಭಾರತೀಯ ವಾಯುಪಡೆಯು(ಐಎಎಫ್) ಮಾಹಿತಿ ನೀಡಿದೆ.

ಅಗ್ನಿಪಥ್ ನೇಮಕಾತಿ ಯೋಜನೆಗೆ ಐಎಎಫ್ ನಡೆಸಿದ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು ಐಎಎಫ್ ಟ್ವಿಟರ್ ನಲ್ಲಿ ತಿಳಿಸಿದೆ. ಯೋಜನೆಯಡಿ ನೇಮಕಾತಿಗಾಗಿ ನೋಂದಣಿ ಜೂ.24 ರಂದು ಪ್ರಾರಂಭವಾಗಿ, ಜು.05 ರಂದು ಅಂತ್ಯಗೊಂಡಿತ್ತು.

ಜೂನ್ 14 ರಂದು ಯೋಜನೆಯನ್ನು ಘೋಷಿಸಿದ ನಂತರ ಅಗ್ನಿಪಥ್ ವಿರುದ್ಧ ಸುಮಾರು ಒಂದು ವಾರದವರೆಗೆ ಹಲವಾರು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ವಿವಿಧ ವಿರೋಧ ಪಕ್ಷಗಳು ಅಗ್ನಿಪಥ್ ಯೋಜನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದವು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಸೇನೆ ಸೇರುವ ವಯೋಮಿತಿಯನ್ನು 21 ರಿಂದ 23ಕ್ಕೇರಿಸಿ ಆದೇಶ ಹೊರಡಿಸಿತ್ತು.