ಅಧಿವೇಶನದಲ್ಲಿ ಬಜೆಟ್ ಬಗ್ಗೆ ಚರ್ಚೆ ನಡೆಯೋಕೆ ಅವಕಾಶ ಕೊಡಿ : ವಿಪಕ್ಷಗಳಿಗೆ ಬಿ.ಎಸ್.ಯಡಿಯೂರಪ್ಪ ಮನವಿ…

143
Firstsuddi

ಬೆಂಗಳೂರು: ಅಧಿವೇಶನದಲ್ಲಿ ಬಜೆಟ್ ಬಗ್ಗೆ ಚರ್ಚೆ ನಡೆಯೋಕೆ ಅವಕಾಶ ಕೊಡಿ ಎಂದು ವಿಪಕ್ಷಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮನವಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟಾಗಿದೆ. ಪ್ರಕರಣವನ್ನು ಎಸ್‍ಐಟಿ ಕೂಡ ತನಿಖೆ ನಡೆಸುತ್ತಿದೆ. ಆ ಹೆಣ್ಣುಮಗಳು ಬಂದು ದೂರನ್ನು ನೀಡಿಲ್ಲ. ಹೀಗಿದ್ದರೂ ವಿಪಕ್ಷದವರು ಧರಣಿ ನಡೆಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಸಿಎಂ ಯಡಿಯೂರಪ್ಪನವರು ಪ್ರಶ್ನಿಸಿದರು.

ಕುಂಟುನೆಪ ಹೇಳಿ ನಿನ್ನೆ ಸದನದಲ್ಲಿ ಧರಣಿ ಮಾಡಿದರು. ಚರ್ಚಿಸಲು ಬೇರೆ ವಿಚಾರ ಸಿಗದೇ ಕಾಲ ಹರಣ ಮಾಡುತ್ತಿದ್ದಾರೆ. ಸದನದಲ್ಲಿ ಕಲಾಪ ನಡೆಸಲು ಬಿಡಿ ಅಂತ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತೇನೆ. ಆ ಹೆಣ್ಣುಮಗಳು ಸಿಕ್ಕಿಲ್ಲ, ಸಿಕ್ಕಿದ್ದರೆ ಪ್ರಕರಣಕ್ಕೊಂದು ಅಂತ್ಯ ಸಿಗಲಿದೆ ಎಂದರು.