ಅಫ್ಘನ್ ಪ್ರಜೆಗಳನ್ನು ಕಾಬೂಲ್ ನಿಂದ ಸ್ಥಳಾಂತರಿಸುತ್ತಿದ್ದ ಉಕ್ರೇನ್ ವಿಮಾನ ಹೈಜಾಕ್?

89
firstsuddi

ಕಾಬೂಲ್ : ಅಫ್ಘಾನಿಸ್ತಾನದ ಪ್ರಜೆಗಳನ್ನು ಕಾಬೂಲ್ ನಿಂದ ಸ್ಥಳಾಂತರಿಸುತ್ತಿದ್ದ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಉಕ್ರೇನ್ ಡೆಪ್ಯುಟಿ ವಿದೇಶಾಂಗ ಮಂತ್ರಿ ಯೆವ್ಗೆನಿ ಯೆನಿನ್, ಅಫ್ಘಾನಿಸ್ತಾನದಿಂದ ಭಾನುವಾರ ಜನರನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನ್ ವಿಮಾನವನ್ನು ಕೆಲ ಅಪರಿಚಿತರು ಹೈಜಾಕ್ ಮಾಡಿದ್ದು, ಇರಾನ್ ನತ್ತ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದರು. ಉಕ್ರೇನ್ ವಿಮಾನ ಹೈಜಾಕ್ ಆಗಿದೆ ಎಂಬ ಸುದ್ದಿ ಹಬ್ಬುತ್ತಲೇ ವಿಮಾನ ಹೈಜಾಕ್ ಆಗಿಲ್ಲ ಎಂದು ಇರಾನ್ ಹೇಳಿದೆ. ಇಂಧನ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಉಕ್ರೇನ್ ವಿಮಾನ ಇರಾನ್‌ ಗೆ ಬಂದಿತ್ತು. ಅದು  ಇಂಧನ ತುಂಬಿಸಿಕೊಂಡು ಉಕ್ರೇನ್‌ನತ್ತ ಹೋಗಿದೆ. ಉಕ್ರೇನ್ ವಿಮಾನ ನಿನ್ನೆ ರಾತ್ರಿ 9.50ಕ್ಕೆ ಕೀವ್ ಏರ್‌ಪೋರ್ಟ್‌ ಗೆ ತಲುಪಿದೆ ಎಂದು ಇರಾನ್  ಹೇಳಿದೆ.