ಅಫ್ಘನ್ನರಿಗೆ ಅಮೆರಿಕಾದಲ್ಲಿ ಆಶ್ರಯ : ಅಮೆರಿಕಾ ಅಧ್ಯಕ್ಷ ಜೋ ಬೈಡನ್.

68
firstsuddi

ವಾಷಿಂಗ್ಟನ್ : ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣವಾಗಿ ಕೈವಶ ಮಾಡಿಕೊಂಡ ಬಳಿಕ ಅಲ್ಲಿನ ಸ್ಥಿತಿ ದಿನದಿಂದ ದಿನಕ್ಕೆ ನರಕ ರೂಪ ಪಡೆದುಕೊಳ್ಳುತ್ತಿದೆ.ಅಮೆರಿಕಾದ ತೆಗೆದುಕೊಂಡ ನಿರ್ಧಾರವೇ ಈ ಎಲ್ಲ ಬೆಳವಣಿಗೆಗೆ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಇದರ ಮಧ್ಯೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಮೆರಿಕಾ ಯುದ್ಧದ ಸಮಯದಲ್ಲಿ ತಮಗೆ ಸಹಾಯ ಮಾಡಿದ್ದ ಅಫ್ಘನ್ನರಿಗೆ ಆಶ್ರಯ ನೀಡಲು ನಿರ್ಧರಿಸಿದೆ. ಒಮ್ಮೆ ಸ್ಕ್ರೀನಿಂಗ್ ಮತ್ತು ಔಪಚಾರಿಕ ಮಾತುಕತೆಗಳು ಅಂತಿಮವಾಗಬೇಕಿದೆ. ನಾವು ಅಫ್ಘನ್ನರನ್ನು ಅಮೆರಿಕಾಗೆ ಸ್ವಾಗತಿಸುತ್ತೇವೆ ನಾವು ಇರೋದು ಹೀಗೆ. ಇದುವೇ ಅಮೆರಿಕಾ ಎಂದು ಜೋ ಬೈಡನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.