ವಾಷಿಂಗ್ಟನ್ : ಯುನೈಟೆಡ್ ಸ್ಟೇಟ್ಸ್ ನ ಪಶ್ವಿಮ ಮ್ಯಾಸಚೂಸೆಟ್ಸ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಭಾರತದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತರನ್ನು ಪ್ರೇಮ್ ಕುಮಾರ್ ರೆಡ್ಡಿ ಗೋಡಾ (27), ಪಾವನಿ ಗುಲ್ಲಪಲ್ಲಿ (22) ಮತ್ತು ಸಾಯಿ ನರಸಿಂಹ ಪಟಂಶೆಟ್ಟಿ (22) ಎಂದು ಗುರುತಿಸಲಾಗಿದೆ. ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಬೆಳಗ್ಗೆ 5:30 ರ ಸುಮಾರಿಗೆ ಮಿನಿವ್ಯಾನ್ ಮತ್ತು ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಮಿನಿವ್ಯಾನ್ ನಲ್ಲಿದ್ದ ಮೂವರು ಸಾವನ್ನಪ್ಪಿದ್ದು, ಘಟನೆಯಲ್ಲಿ ಗಾಯಗೊಂಡ ಇತರ ಐದು ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮ್ಯಾಸಚೂಸೆಟ್ಸ್ ರಾಜ್ಯ ಮತ್ತು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದವರನ್ನು ಅಂತಾರಾಷ್ಟ್ರೀಯ ಕಾಲೇಜು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದ್ದು, ಆರು ಮಂದಿಯನ್ನು ನ್ಯೂ ಹೆವನ್ ವಿಶ್ವವಿದ್ಯಾಲಯದಲ್ಲಿ ಮತ್ತು ಒಬ್ಬರು ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಟ್ರಕ್ ಚಾಲಕನನ್ನು 46 ವರ್ಷದ ಅರ್ಮಾಂಡೋ ಬೌಟಿಸ್ಟಾ-ಕ್ರೂಜ್ ರನ್ನು ಚಿಕಿತ್ಸೆಗಾಗಿ ಫೇರ್ ವ್ಯೂ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಲಾಗಿದೆ.