ಅಮೆರಿಕ, ಯುರೋಪ್‍ನಲ್ಲಿ ಮಂಕಿಪಾಕ್ಸ್ ಪತ್ತೆ…

44
firstsuddi

ಅಮೆರಿಕ ಹಾಗೂ ಯುರೋಪ್‍ನಲ್ಲಿ ಮಂಕಿಪಾಕ್ಸ್ ಪತ್ತೆಯಾಗಿದೆ. ಮೇ ತಿಂಗಳ ಆರಂಭದಿಂದಲೇ ಹಲವಾರು ಮಂದಿಯಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ಉತ್ತರ ಅಮೆರಿಕ ಮತ್ತು ಯುರೋಪ್ ನ ಆರೋಗ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇದೀಗ ಎಲ್ಲಡೆ ಆತಂಕ ಸೃಷ್ಟಿಸಿದೆ.

ಬುಧವಾರ ಅಮೇರಿಕದಲ್ಲಿ ಮೊದಲ ಪ್ರಕರಣ ಕಂಡುಬಂದಿದೆ. ಪೂರ್ವ ರಾಜ್ಯವಾದ ಮ್ಯಾಸಚೂಸೆಟ್ಸ್‍ನ ವ್ಯಕ್ತಿಯೊಬ್ಬರು ಕೆನಾಡಕ್ಕೆ ಭೇಟಿ ನೀಡಿದ ಬಳಿಕ ವೈರಸ್ ದೃಢಪಟ್ಟಿದೆ. ಇದು ಅಪರೂಪದ ವೈರಲ್ ಸೋಂಕಾಗಿದ್ದು, ರೋಗಗ್ರಸ್ಥ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಸೌಮ್ಯ ಲಕ್ಷಣಗಳಿದ್ದ ರೋಗಿಗಳು ಕೆಲವೇ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. 

ಮಂಕಿಪಾಕ್ಸ್ ಎಂದರೇನು?
ಮಂಕಿಪಾಕ್ಸ್ ವೈರಸ್‍ನಿಂದ ಹರಡುವ ಕಾಯಿಲೆಯಾಗಿದೆ. ಇದು ಆರ್ಥೋಪಾಕ್ಸ್ ಕುಲಕ್ಕೆ ಸೇರಿದ್ದು, ಇದರಲ್ಲಿ ವೆರಿಯೊಲಾ ವೈರಸ್, ವ್ಯಾಕ್ಸಿನಿಯಾ ಮತ್ತು ಕೌಪಾಕ್ಸ್ ಸೇರಿವೆ. ಸಿಡಿಸಿ ಪ್ರಕಾರ, ಮಂಕಿಪಾಕ್ಸ್ ಅನ್ನು ಮೊದಲು 1958ರಲ್ಲಿ ಕಂಡುಹಿಡಿಯಲಾಯಿತು.

ವೈರಸ್ ಹರಡುವುದು ಹೇಗೆ?
ಇದು ಪ್ರಾಣಿಯಿಂದ ಮನುಷ್ಯರಿಗೆ ಹರಡುತ್ತದೆ. ಕಚ್ಚುವಿಕೆ, ಗೀರು ಅಥವಾ ಗಾಯದ ಮೂಲಕ ನೇರ ಅಥವಾ ಪರೋಕ್ಷ ಸಂಪರ್ಕದ ಮೂಲಕ ಪ್ರಾಣಿಯಿಂದ ಮನುಷ್ಯನಿಗೆ ರೋಗ ಹರಡುವ ಸಂಭವವಿದೆ.

ಮಂಕಿಪಾಕ್ಸ್  ನ ಲಕ್ಷಣಗಳೇನು?
ಸೀತ, ಜ್ವರ, ಆಯಾಸ, ಸ್ನಾಯು ಸೆಳೆತ, ಬೆನ್ನಹುರಿ ನೋವು ಉಂಟಾಗಬಹುದು. ಇದು ಸಿಡುಬಿನಂತೆಯೇ ಕಂಡರೂ ಅಷ್ಟು ಗಂಭೀರ ಕಾಯಿಲೆ ಆಗಿರುವುದಿಲ್ಲ.

ಮುನ್ನೆಚ್ಚರಿಕಾ ಕ್ರಮಗಳು : ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣಿಯಿಂದ ದೂರವಿರಿ. ಆಗಾಗ ಕೈಗಳನ್ನು ತೊಳೆದು ಸ್ವಚ್ಛವಾಗಿಟ್ಟುಕೊಳ್ಳಿ. ಸೋಂಕಿತ ರೋಗಿಗಳಿಂದ ದೂರವಿರಿ. ಮಂಕಿಪಾಕ್ಸ್ ಅನ್ನು ತಡೆಗಟ್ಟುವಲ್ಲಿ ಸಿಡುಬು ಲಸಿಕೆ ಶೇ.85ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ.