ಮುಂಬೈ : 14 ವರ್ಷದ ಬಾಲಕಿಯೊಬ್ಬಳು ಅಮ್ಮನಿಗೆ ಪತ್ರ ಬರೆದಿಟ್ಟು ನೇಪಾಳದಲ್ಲಿರುವ ಟಿಕ್ ಟಾಕ್ ಸ್ಟಾರ್ ರಿಯಾಜ್ ಅಫ್ರೀನ್‍ನ್ನು ಭೇಟಿಯಾಗಲು ಮನೆ ಬಿಟ್ಟು ಹೋಗಿದ್ದು, ಅಮ್ಮ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ ಅಪ್ಪ ನನಗೆ ಯಾರಾ ಬಳಿಯು ಮಾತನಾಡಲು ಬಿಡುವುದಿಲ್ಲ. ನಾನು ಯಾವ ಹುಡುಗನ ಜೊತೆಯೂ ಹೋಗುತ್ತಿಲ್ಲ. ಅಪ್ಪನ ವರ್ತನೆಯಿಂದ ನನಗೆ ಬೇಸರವಾಗಿದೆ. ಹೀಗಾಗಿ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಬಾಲಕಿ ಮನೆ ಬಿಟ್ಟು ಹೋಗಿದ್ದಳು. ಈ ವಿಷಯ ತಿಳಿದ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ಬಾಲಕಿಯ ಸ್ನೇಹಿತರನ್ನು ಕೇಳಿದಾಗ ಬಾಲಕಿ ನೇಪಾಳದ ಟಿಕ್ ಟಾಕ್ ಸ್ಟಾರ್ ರಿಯಾಜ್ ಅಫ್ರೀನ್ ಅವರ ಅಭಿಮಾನಿಯಾಗಿದ್ದಳು. ಅವರನ್ನು ಭೇಟಿ ಮಾಡಲು ಹೋಗುತ್ತೇನೆ ಎಂದು ಹೇಳಿದ್ದಳು ಎಂದು ತಿಳಿಸಿದ್ದಾರೆ. ಬಳಿಕ ಬಾಲಕಿಯನ್ನು ಹುಡುಕಿ ವಿಚಾರಣೆ ನಡೆಸಿದಾಗ ಬಾಲಕಿ ಪತ್ರ ಬರೆದಿಟ್ಟು ನೇಪಾಳದಲ್ಲಿರುವ 16ವರ್ಷದ ಟಿಕ್ ಟಾಕ್ ಸ್ಟಾರ್ ರಿಯಾಜ್ ಅಫ್ರೀನ್ ಅವರನ್ನು ಭೇಟಿಯಾಗಲು ಹೋಗಿರುವುದಾಗಿ ತಿಳಿದು ಬಂದಿದೆ.










