ಅಯೋಧ್ಯೆ ವಿವಾಧಿತ ಜಮೀನಿನಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂ ಗ್ರೀನ್ ಸಿಗ್ನಲ್…

475
firstsuddi

ನವದೆಹಲಿ : ಇಡೀ ದೇಶವೇ ತೀವ್ರ ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆ ಭೂವಿವಾದಕ್ಕೆ ಅಂತ್ಯ ಹಾಡಿರುವ ಸುಪ್ರೀಂ ಕೋರ್ಟ್, ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಮುಖ್ಯ ನ್ಯಾಯಾಮೂರ್ತಿ ರಂಜನ್ ಗೋಗಯ್, ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಹಾಗೂ ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಅಯೋಧ್ಯೆ ವಿವಾಧಿತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೇ ಈವರೆಗೂ ಅಯೋಧ್ಯೆ ಜಾಗ ತಮಗೆ ಸೇರಬೇಕಾಗಿದ್ದು ಎಂದು ಕೇಳಿದ್ದ ಸುನ್ನಿ ವಕ್ಫ್ ಬೋರ್ಡ್‍ಗೆ ಅಯೋದ್ಯೆಯಲ್ಲಿ ಬೇರೆ ಎಲ್ಲಾದರೂ ಮಸೀದಿ ನಿರ್ಮಾಣ ಮಾಡಲು 5 ಎಕರೆ ಜಮೀನು ನೀಡಬೇಕೆಂದು ತಿಳಿಸಿದೆ. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿದಂತೆ ಕೇಂದ್ರ ಸರ್ಕಾರ 3 ತಿಂಗಳೊಳಗೆ ಮಂದಿರ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಬೇಕು ಮತ್ತು 3ತಿಂಗಳೊಳಗೆ ಭೂಮಿಯ ಸ್ವಾಧೀನವನ್ನು ಟ್ರಸ್ಟ್ ಗೆ ನೀಡಬೇಕು ಎಂದು ಆದೇಶ ಹೊರಡಿಸಿದೆ.