ಲಕ್ನೋ: ‘ಅಲ್ಲಾ’ ಎಂಬ ಪದವು ಸಂಸ್ಕೃತದಿಂದ ಬಂದಿದೆ ಎಂದು ವಾರಾಣಸಿಯ ಗೋವರ್ಧನ ಪುರಿ ಮಠದ ಮುಖ್ಯಸ್ಥರಾದ ನಿಶ್ಚಲಾನಂದ ಸರಸ್ವತಿ ಹೇಳಿಕೆ ನೀಡಿದ್ದಾರೆ.
ಅಲ್ಲಾ ಎಂಬ ಪದ ಹೆಣ್ತನದ ಶಕ್ತಿಯನ್ನು ಸೂಚಿಸುತ್ತದೆ. ಈ ಪದವನ್ನು ದುರ್ಗಾ ದೇವಿಯನ್ನು ಪ್ರಾರ್ಥಿಸಲು ಬಳಸಲಾಗುತ್ತದೆ. ಜಗತ್ತಿನಲ್ಲಿ ಇರುವುದು ಕೇವಲ ಒಂದೇ ಧರ್ಮ. ಅದು ಹಿಂದೂ ಸನಾತನ ಧರ್ಮ. ಉಳಿದ ಎಲ್ಲಾ ಧರ್ಮಗಳು ಕೇವಲ ಪಂಗಡಗಳು. ಧರ್ಮದ ಬಗ್ಗೆ ಪ್ರಶ್ನೆಯನ್ನು ಎತ್ತುವವರು ಮೊದಲು ಸಂಸ್ಕೃತ ವ್ಯಾಕರಣವನ್ನು ಕಲಿತುಕೊಳ್ಳಿ ಎಂದು ಹೇಳಿದರು.
ಸನಾತನ ಧರ್ಮವನ್ನು ಅನುಸರಿಸುವುದರಿಂದ ಮಾತ್ರ ಜೀವನದಲ್ಲಿ ಸಂತೋಷ ಹಾಗೂ ಮರಣಾನಂತರ ಮೋಕ್ಷ ಸಾಧ್ಯ. ಧರ್ಮದ ಪ್ರಶ್ನೆಗಳನ್ನು ಎತ್ತುವವರು ಮೊದಲು ಸಂಸ್ಕೃತದ ವ್ಯಾಕರಣದ ಅಧ್ಯಯನ ಮಾಡಬೇಕು ಎಂದರು.
ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಸೈಯದ್ ಅರ್ಷದ್ ಮದನಿ, ಅಲ್ಲಾ ಹಾಗೂ ಓಂ ಒಂದೇ ಎಂದಿರುವುದನ್ನು ಸ್ವಾಮೀಜಿ ಖಂಡಿಸಿದ್ದಾರೆ. ಬೇರೆ ಧರ್ಮದ ಗ್ರಂಥಗಳ ವಿರುದ್ಧ ಮಾತನಾಡುವ ಧೈರ್ಯ ಯಾರಿಗೂ ಇಲ್ಲ. ರಾಮಚರಿತಮಾನಸಗಳನ್ನು ಪ್ರಶ್ನಿಸುವವರು ಚಾಣಕ್ಯ ನೀತಿಯನ್ನು ಓದಬೇಕು ಎಂದರು.










