ಆದೇಶ ಧಿಕ್ಕರಿಸಿದ ಜಮೀರ್ ಪುತ್ರನ ಸಿನಿಮಾಕ್ಕೆ ಸರ್ಕಾರ ಶಾಕ್, ಚಿತ್ರೀಕರಣ ಸ್ಥಗಿತ.

49

ಸರ್ಕಾರ ಆದೇಶವನ್ನು ಉಲ್ಲೇಂಘಿಸಿದಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಮತ್ತು ರಚಿತಾ ರಾಮ್ ಅಭಿನಯದ ‘ಕಲ್ಟ್’ ಸಿನಿಮಾದ ಶೂಟಿಂಗ್‍ಗೆ ಅರಣ್ಯ ಇಲಾಖೆ ಶಾಕೆ ನೀಡಿದ್ದು ಚಿತ್ರೀಕರಣ ಸ್ಥಗಿತಗೊಂಡಿದೆ. ಈ ಹಿಂದೆ ಚಿತ್ರೀಕರಣದ ವೇಳೆ ದುಬಾರಿ ಡ್ರೋನ್ ಮುರಿದು, ಡ್ರೋನ್ ಮಾಲೀಕ ಆತ್ಮಹತ್ಯೆಗೆ ಮುಂದಾಗಿ ದೊಡ್ಡ ವಿವಾದವೇ ಆಗಿತ್ತು. ಕೊನೆಗೆ ಝೈದ್ ಖಾನ್, ತಮ್ಮ ಕೈಯಿಂದ ಹಣ ಕೊಟ್ಟು ಯುವಕನಿಗೆ ಸಹಾಯ ಮಾಡಿದ್ದರು. ಇದೀಗ ಇದೇ ಸಿನಿಮಾಕ್ಕೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಸಿನಿಮಾದ ಚಿತ್ರೀಕರಣವನ್ನೇ ಬಂದ್ ಮಾಡಿಸಲಾಗಿದೆ. ಯಾವುದೇ ಸಿನಿಮಾಗಳ ಹೊರಾಂಗಣ ಚಿತ್ರೀಕರಣ ಮಾಡುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂಬ ನಿಯಮ ಈಗಾಗಲೇ ಇದೆ. ಅಲ್ಲದೆ ಇತ್ತೀಚೆಗೆ ಕೆಲ ಸಿನಿಮಾಗಳ ಚಿತ್ರೀಕರಣದ ವೇಳೆ ಅರಣ್ಯ ನಾಶದ ಆರೋಪವೂ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ನಿಯಮವನ್ನು ಇನ್ನಷ್ಟು ಕಠಿಣಗೊಳಿಸಿ ಶಿಸ್ತಿನಿಂದ ಜಾರಿಗೊಳಿಸಲಾಗುತ್ತಿದೆ. ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಹ ಯಾವುದೇ ಸಿನಿಮಾಗಳು ಅರಣ್ಯ ಪ್ರದೇಶ ಅಥವಾ ಯಾವುದೇ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಮುಂದಾದಾಗ ಖಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ತಿಳಿಸಿದ್ದರು. ಆದರೆ ಝೈದ್ ಖಾನ್ ನಟಿಸುತ್ತಿರುವ ಕಲ್ಟ್ ಸಿನಿಮಾ ತಂಡವು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪುರ, ರಂಗಾಪುರ ಬಳಿ ಚಿತ್ರೀಕರಣಕ್ಕೆ ಮುಂದಾಗಿತ್ತು. ಆದರೆ ಚಿತ್ರತಂಡ ಸೂಕ್ತ ಅನುಮತಿಯನ್ನು ಪಡೆದಿರಲಿಲ್ಲವಾದ್ದರಿಂದ ಸ್ಥಳೀಯ ಅರಣ್ಯ ಅಧಿಕಾರಿಗಳು ಚಿತ್ರೀಕರಣ ತಂಡಕ್ಕೆ ನೊಟೀಸ್ ನೀಡಿದೆ. ಚಿತ್ರೀಕರಣವನ್ನು ಬಂದ್ ಮಾಡುವಂತೆ ಸೂಚಿಸಿದೆ. ಅದರಂತೆಯೇ ಕಲ್ಟ್ ಸಿನಿಮಾದ ಚಿತ್ರೀಕರಣಕ್ಕೆ ತಡೆ ನೀಡಲಾಗಿದೆ.