ಇಂದು ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯಾರಾಧನೆ…

73
firstsuddi

ಬೆಂಗಳೂರು : ನಟ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದ್ದು, ಈ ಹಿನ್ನಲೆ ಇಂದು 11ನೇ ದಿನದ ಪುಣ್ಯಾರಾಧನೆ ಹಮ್ಮಿಕೊಳ್ಳಲಾಗಿದೆ. ಸದಾಶಿವನಗರದ ಪುನೀತ್ ನಿವಾಸದಲ್ಲಿ ಪುಣ್ಯಾರಾಧನೆ ನಡೆಯಲಿದ್ದು, ವಿನಯ್ ರಾಜ್‍ಕುಮಾರ್ ಚಿಕ್ಕಪ್ಪನ ಪುಣ್ಯಾರಾಧನೆಯ ವಿಧಿವಿಧಾನವನ್ನು ನೆರವೇರಿಸಲಿದ್ದಾರೆ.

ಬೆಳಗ್ಗೆ 11 ಗಂಟೆ ನಂತರ ಪುಣ್ಯಾರಾಧನೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಸಂಬಂಧಿಗಳು, ಚಿತ್ರರಂಗದ ಪ್ರಮುಖರು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.