ಇಂದು ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ರೀ-ಎಂಟ್ರಿ…

73
firstsuddi

ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ್ ಅವರು ಔಟ್ ಆಗಿದ್ದರು. ಅವರು ಮತ್ತೆ ಬರುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಅವರು ದೊಡ್ಮನೆಗೆ ಇಂದು ಎಂಟ್ರಿ ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಬಿಗ್ ಬಾಸ್’ ಮನೆ ಒಳಗೆ ಹೋಗುವಾಗ ವರ್ತೂರು ಸಂತೋಷ್ ಅವರು ಹುಲಿ ಉಗುರು ಹೊಂದಿರುವ ಚೈನ್ ಧರಿಸಿದ್ದರು. ವನ್ಯಜೀವಿಗಳ ಅಂಗಾಂಗವನ್ನು ಇಟ್ಟುಕೊಳ್ಳುವಂತಿಲ್ಲ. ಹಾಗೊಮ್ಮೆ ಇಟ್ಟುಕೊಂಡರೆ ಅದು ಕಾನೂನಿಗೆ ವಿರುದ್ಧವಾದುದು. ಈ ಕಾರಣದಿಂದಲೇ ಸಂತೋಷ್ ಅವರನ್ನು ಬಂಧಿಸಲಾಗಿತ್ತು.

ಜಾಮೀನು ದೊರೆತ ಹಿನ್ನೆಲೆಯಲ್ಲಿ ಜೈಲಿನಿಂದ ನಿನ್ನೆ ಹೊರಬಂದಿರುವ ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ದೊಡ್ಮನೆ ಪ್ರವೇಶದ ಹಿನ್ನೆಲೆಯಲ್ಲೇ ನಿನ್ನೆ ಅವರನ್ನು ಮಾಧ್ಯಮಗಳ ಮುಂದೆ ಹೋಗದಂತೆ ತಡೆಯಲಾಯಿತು. ಕನಿಷ್ಠ ಅವರ ಕುಟುಂಬದ ಜೊತೆಯೂ ಮಾತನಾಡಲಿಕ್ಕೆ ಅವಕಾಶ ಕಲ್ಪಿಸಿಲ್ಲ.

ಬಿಗ್ ಬಾಸ್ ನಿಯಮದ ಪ್ರಕಾರ, ಒಂದು ಸಲ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದ ನಂತರ ಮತ್ತೆ ಅವರು ಕುಟುಂಬದೊಂದಿಗೆ ಸಂಪರ್ಕ ಮಾಡುವುದಾಗಲಿ ಮತ್ತು ಕುಟುಂಬದ ಸದಸ್ಯರ ಜೊತೆ ಬೆರೆಯುವುದಾಗಲಿ ಮಾಡುವಂತಿಲ್ಲ. ಆ ನಿಯಮವನ್ನು ವರ್ತೂರ್ ಕೂಡ ಮಾಡಿದ್ದಾರೆ. ಹಾಗಾಗಿ ಜೈಲಿನಿಂದ ಸೀದಾ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.

ನಿನ್ನೆಯೇ ಬಿಗ್ ಬಾಸ್ ತಂಡವನ್ನು ಸೇರಿರುವ ಸಂತೋಷ್, ಇಂದು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ. ಅದು ಹೇಗೆ ಎನ್ನುವ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ. ಬಿಗ್ ಬಾಸ್ ಮನೆಗೆ ಹೋಗುವ ಕುರಿತು ಸಂತೋಷ್ ತಾಯಿಯೂ ಖಚಿತ ಪಡಿಸಿದ್ದಾರೆ. ಅವರ ಎಂಟ್ರಿ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.