ಇಂದು ಮತ್ತೆ ಏರಿಕೆಯಾದ ಪಟ್ರೋಲ್,ಡೀಸೆಲ್ ಬೆಲೆ..!

126
First Suddi

ನವದೆಹಲಿ : ಭಾರತದಲ್ಲಿ ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಕಂಡಿದ್ದು, ಪೆಟೋಲ್ ದರದಲ್ಲಿ 39 ಪೈಸೆ ಹೆಚ್ಚಳವಾದರೆ, ಡೀಸೆಲ್ ದರದಲ್ಲಿ 37 ಪೈಸೆಯಷ್ಟು ಹೆಚ್ಚಳವಾಗಿದೆ.
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರದಲ್ಲಿ 39 ಪೈಸೆ ಮತ್ತು ಡೀಸೆಲ್ ದರದಲ್ಲಿ 37 ಪೈಸೆ ಏರರಿಯಾಗಿ, ಆ ಮೂಲಕ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 90.58 ರೂ. ಏರಿಕೆಯಾದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 80.97 ರೂ. ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 38 ಪೈಸೆ ಮತ್ತು ಡೀಸೆಲ್ ದರ 40 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 96.98 ರೂ.ಏರಿಕೆಯಾದರೆ, ಡೀಸೆಲ್ ಬೆಲೆ 88.06 ರೂ.ಏರಿಕೆಯಾಗಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 91.76 ರೂ.ಏರಿಕೆಯಾದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 84.54 ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 92.58 ರೂ.ಏರಿಕೆಯಾದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 85.61 ರೂ ಏರಿಕೆಯಾಗಿದೆ. ಇನ್ನೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 40ಪೈಸೆ ಮತ್ತು ಡೀಸೆಲ್ ದರ 39 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 93.59 ರೂ.ಗೆ ಏರಿಕೆಯಾದರೆ.ಡೀಸೆಲ್ ಬೆಲೆಯಲ್ಲಿ 85.82 ರೂ.ಗೆ ಏರಿಕೆಯಾಗಿದೆ.