ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬಳಸಿದರೆ ಭಾರೀ ದಂಡ…

46
firstsuddi

ರೋಮ್ : ಇಟಲಿಯಲ್ಲಿ ಇನ್ನು ಮುಂದೆ ಇಂಗ್ಲಿಷ್ ಅಥವಾ ಬೇರೆ ಯಾವುದೇ ವಿದೇಶಿ ಭಾಷೆಯಲ್ಲಿ ಸಂವಹನ ನಡೆಸಿದರೆ ಭಾರೀ ದಂಡ ವಿಧಿಸಲಾಗುತ್ತದೆ.

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಯ ಅವರ ಬ್ರದರ್ಸ್ ಆಫ್ ಇಟಲಿ ಪಕ್ಷ ಕರಡು ಮಸೂದೆಯನ್ನು ಮಂಡಿಸಿದೆ. ಇದರ ಪ್ರಕಾರ ದೇಶದಲ್ಲಿ ಅಧಿಕೃತ ಸಂವಹನ ಇಟಲಿ ಭಾಷೆಯಲ್ಲಿ ನಡೆಯಬೇಕು. ಯಾವುದೇ ವಿದೇಶಿ ಭಾಷೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಮಾಡುವಂತಿಲ್ಲ ಎಂಬ ನಿಯಮವನ್ನು ಒಳಗೊಂಡಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ 100,000 ಯುರೋ (ಸುಮಾರು 90 ಲಕ್ಷ ರೂ.) ವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಇಟಾಲಿಯನ್ ಭಾಷೆಯನ್ನೇ ಲಿಖಿತ ಹಾಗೂ ಮೌಖಿಕವಾಗಿ ಬಳಸಲು ಹಾಗೂ ಸಾರ್ವಜನಿಕರಿಗೆ ಈ ಭಾಷೆಯ ಜ್ಞಾನ ಹಾಗೂ ಪಾಂಡಿತ್ಯವನ್ನು ಹೆಚ್ಚಿಸಲು ಈ ನಿರ್ಧಾರ ಮಾಡಲಾಗಿದೆ.

ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಯುವ ಜನತೆ ಬೀಳುತ್ತಿದ್ದಾರೆ. ಇದರಿಂದಾಗಿ ಇಟಲಿಯ ಸಂಸ್ಕೃತಿ ಮತ್ತು ಆರ್ಥಿಕತೆಗೆ ಸಮಸ್ಯೆಯಾಗುತ್ತದೆ. ಈ ಕಾರಣಕ್ಕೆ ಇಂಗ್ಲಿಷ್ ಬಳಕೆಯ ಮೇಲೆ ನಿರ್ಬಂಧ ಹೇರುವ ಮಸೂದೆ ಮಂಡನೆ ಮಾಡಲಾಗಿದೆ ಎಂದು ಬ್ರದರ್ಸ್ ಆಫ್ ಇಟಲಿ ಪಕ್ಷ ಸಮರ್ಥಿಸಿಕೊಂಡಿದೆ.