ಉತ್ತರ ಪ್ರದೇಶ ಚುನಾವಣೆ – ಕಾಂಗ್ರೆಸ್ ತೊರೆದ ಆರ್‌ಪಿಎನ್ ಸಿಂಗ್.

76
firstsuddi

ನವದೆಹಲಿ : ಬಿಜೆಪಿ, ಎಸ್ ಪಿಯ ಬಳಿಕ ಈಗ ಕಾಂಗ್ರೆಸ್ ಗೆ ಬಿಗ್ ಶಾಕ್ ಎದುರಾಗಿದೆ. ಮಾಜಿ ಕೇಂದ್ರ ಸಚಿವ ಆರ್‌ಪಿಎನ್ ಸಿಂಗ್ ಅವರು ಇಂದು ಕಾಂಗ್ರೆಸ್ ನಾಯಕ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದಾರೆ.  

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಗಣರಾಜೋತ್ಸವದ ಆಚರಣೆ ಹೊತ್ತಲ್ಲಿ ನಾನು ರಾಜಕೀಯ ಪ್ರಯಾಣದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಟ್ವೀಟ್ ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ನೀಡಿದ ರಾಜೀನಾಮೆ ಪತ್ರವನ್ನು ಅವರು ಲಗತ್ತಿಸಿದ್ದಾರೆ.

ಆರ್‌ಪಿಎನ್ ಸಿಂಗ್ ರಾಜೀನಾಮೆ ಚುನಾವಣೆಗೆ ನಷ್ಟವಾಗದಿದ್ದರೂ ಪಕ್ಷದ ಮಟ್ಟಿಗೆ ನಷ್ಟ ಎನ್ನಲಾಗಿದೆ. ಆರ್ ಪಿಎನ್ ಸಿಂಗ್ 2009 ರಲ್ಲಿ ಅವರು ಗೋರಖ್ಪುರದ ಪಕ್ಕದಲ್ಲಿರುವ ಕುಶಿ ನಗರದಿಂದ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 1996 ರಿಂದ 2009 ರವರೆಗೆ ಮೂರು ಬಾರಿ ಪದ್ರೌನಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ಆದರೆ ಭಾರಿ ಪ್ರಬಲ ನಾಯಕರಲ್ಲದಿದ್ದರೂ ಹೈಕಮಾಂಡ್ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.