ಎಚ್ಚರ..! ಬ್ಲೂಟೂತ್ ಇಯರ್ ಫೋನ್ ಸ್ಫೋಟಗೊಂಡು ಯುವಕ ಸಾವು…

122
firstsuddi

ಜೈಪುರ್ : ಬ್ಲೂಟೂತ್ ಇಯರ್ ಫೋನ್ ಸ್ಫೋಟಗೊಂಡ ಪರಿಣಾಮ ಯುವಕ ಮೃತಪಟ್ಟಿರುವ ಘಟನೆ ಜೈಪುರದ ಚೌಮು ಪಟ್ಟಣದಲ್ಲಿ ನಡೆದಿದೆ. ಚೌಮು ಪಟ್ಟಣದ ಉದೈಪುರಿಯಾ ಗ್ರಾಮದ ನಿವಾಸಿ ರಾಕೇಶ್ ಮೃತ ದುರ್ದೈವಿ.

ರಾಕೇಶ್ ಬ್ಲೂಟೂತ್ ಇಯರ್ ಫೋನ್ ಕಿವಿಗೆ ಹಾಕಿಕೊಂಡು ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಇಯರ್ ಫೋನ್ ಸ್ಫೋಟಗೊಂಡಿದೆ. ಸ್ಫೋಟದ ನಂತರ ರಾಕೇಶ್ ಕುಸಿದು ಬಿದ್ದು ಪ್ರಜ್ಞಾಹೀನನಾಗಿದ್ದ. ಸ್ಫೋಟದಲ್ಲಿ ಯುವಕನ ಎರಡೂ ಕಿವಿಗಳಿಗೆ ಗಾಯಗಳಾಗಿದ್ದವು. ಅಲ್ಲದೇ ಇದರಿಂದ ಆಘಾತಕ್ಕೊಳಗಾದ ಯುವಕನಿಗೆ ಹೃದಾಯಾಘಾತವಾಗಿದೆ. ತಕ್ಷಣ ಯುವಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.