ಎನ್‍ಐಯ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ-9ಮಂದಿ ಅಲ್-ಖೈದಾ ಉಗ್ರ ಸಂಘಟನೆಯ ಉಗ್ರರ ಬಂಧನ…

112
firstsuddi

ನವದೆಹಲಿ : ಎನ್‍ಐಎ ಅಧಿಕಾರಿಗಳು ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 9 ಮಂದಿ ಉಗ್ರರನ್ನು ಬಂಧಿಸಿದ್ದಾರೆ. ಬಂಧಿತ ಉಗ್ರರನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲದ ಅಬು ಸುಫಿಯಾನ್, ಮೈನುಲ್ ಮೊಂಡಾಲ್, ನಜ್ಮಸ್ ಸಕೀಬ್, ಲ್ಯುಯೆನ್ ಅಹಮ್ಮದ್, ಅತಿತೂರ್ ರೆಹಮಾನ್ ಹಾಗೂ ಅಲ್ ಮಾಮುನ್ ಕಮಲ್, ಕೇರಳದ ಎರ್ನಾಕುಲಂ ಮೂಲದ ಮೊಸರಾಫ್ ಹುಸೈನ್, ಮುರ್ಷಿದ್ ಹುಸೇನ್ ಹಾಗೂ ಇಯಾಕುಬ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಇವರೆಲ್ಲರು ಪಾಕಿಸ್ತಾನ ಮೂಲದ ಅಲ್-ಖೈದಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ಇವರನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರೇರೇಪಿಸಿ ದೆಹಲಿ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಈ ಕುರಿತು ಖಚಿತ ಮಾಹಿತಿಯನ್ನು ತಿಳಿದ ಎನ್‍ಐಎ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದು ದೇಶದ ವಿವಿಧ ಭಾಗಗಳಲ್ಲಿ 9 ಮಂದಿ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಉಗ್ರರಿಂದ ಕೃತ್ಯಕ್ಕೆ ಬಳಸುವಂತಹ ಅಪಾರ ಪ್ರಮಾಣದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.