ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ವರದಿ ನಿರಾಕರಿಸಿದ ಕೇಂದ್ರ ಸರ್ಕಾರ…

80
firstsuddi

ನವದೆಹಲಿ : ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಸಲ್ಲಿಸಿರುವ ಬಿಡ್ ಟಾಟಾ ಗ್ರೂಪ್ ಗೆದ್ದಿದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ.

ಏರ್ ಇಂಡಿಯಾವನ್ನು ಮರುಪಡೆಯುವಲ್ಲಿ ಟಾಟಾ ಗ್ರೂಪ್ ಯಶಸ್ವಿಯಾಗಿದೆ ಎಂದು ಬ್ಲೂಮ್ ಬರ್ಗ್ ಕ್ವಿಂಟ್ ವರದಿ ಮಾಡಿತ್ತು. ಏರ್ ಇಂಡಿಯಾವನ್ನು ಪಡೆದುಕೊಳ್ಳಲು ಟಾಟಾ ಸನ್ಸ್ ಸಲ್ಲಿಸಿರುವ ಬಿಡ್ಗೆ ಕೇಂದ್ರ ಅನುಮೋದನೆ ನೀಡಿದೆ ಎಂಬ ವರದಿ ಇಂದು ಎಲ್ಲೆಡೆ ಹರಿದಾಡುತ್ತಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಈ ರೀತಿಯ ಯಾವುದೇ ನಿರ್ಧಾರ ಕೈಗೊಂಡಾಗ ಖಂಡಿತವಾಗಿಯೂ ಮಾಧ್ಯಮಗಳಿಗೆ ಖುದ್ದಾಗಿ ತಿಳಿಸಲಾಗುವುದು ಎಂದಿದೆ.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಏರ್ ಇಂಡಿಯಾವನ್ನು ಮಾರಾಟ ಮಾಡುವ ಎರಡನೇ ಪ್ರಯತ್ನ ಇದಾಗಿದೆ. ಕೇಂದ್ರವು ಮಾರ್ಚ್ 2018 ರಲ್ಲಿ ಇದೇ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲು ವಿಫಲ ಯತ್ನವನ್ನು ಮಾಡಿತ್ತು.