ಭುವನೇಶ್ವರ : ಇಂದು ದೇಶದಾದ್ಯಂತ ಗಣೇಶ ಚತುರ್ಥಿಯನ್ನ ಸಡಗರದಿಂದ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿ ವಿಶೇಷ ದಿನಕ್ಕಾಗಿ ಒಡಿಶಾದ ಕಲಾವಿದರೊಬ್ಬರು ಬೆಂಕಿ ಕಡ್ಡಿಗಳನ್ನು ಬಳಸಿ ಗಣೇಶನ ವಿಗ್ರಹವನ್ನು ತಯಾರಿಸಿದ್ದಾರೆ. ಸುಮಾರು 5,621 ಬೆಂಕಿ ಕಡ್ಡಿಗಳನ್ನು ಉಪಯೋಗಿಸಿ ಗಣೇಶನ ಮೂರ್ತಿಯನ್ನು ತಯಾರಿಸಲಾಗಿದ್ದು, ಕಲಾಕೃತಿಯು ಸುಮಾರು 23 ಇಂಚು ಉದ್ದ ಹಾಗೂ 22 ಇಂಚು ಅಗಲವಾಗಿದೆ.
ಕಳೆದ ಎಂಟು ದಿನಗಳಿಮದ ಕಲಾಕೃತಿ ತಯಾರಿಸಲು ಪ್ರಾರಂಭಿಸಿದ್ದೇನೆ ಎಂದು ಕಲಾವಿದ ಸಾಸ್ವತ್ ಸಾಹೂ ಹೇಳಿದ್ದಾರೆ. ಕೊವಿಡ್-19 ಸಾಂಕ್ರಾಮಿಕ ಹರಡುವಿಕೆಯಿಂದ ಗಣೇಶ ಹಬ್ಬ ಅಷ್ಟು ವಿಜೃಂಭಣೆಯಿಂದ ನಡೆಯುತ್ತಿಲ್ಲ. ಈ ನಡುವೆ ಮನೆಯಲ್ಲಿದ್ದ ನಾನು ಹೊಸದಾಗಿ ಯೋಚಿಸಿದೆ. ಸಾಂಕ್ರಾಮಿಕದ ನಡುವೆ ನನ್ನ ಮನೆಯಲ್ಲಿ ಹಬ್ಬದ ವಿಶೇಷವಾಗಿ ಈ ಮೂರ್ತಿಯನ್ನು ತಯಾರಿಸಿದ್ದೇನೆ ಎಂದು ತಿಳಿಸಿದ್ದಾರೆ.










