ಒಂದೇ ಆಂಬ್ಯುಲೆನ್ಸ್ ನಲ್ಲಿ 22 ಕೋವಿಡ್ ಸೋಂಕಿತರ ಮೃತದೇಹಗಳು..!

140
firstsuddi

ಮುಂಬೈ : ಒಂದೇ ಆಂಬ್ಯುಲೆನ್ಸ್ ನಲ್ಲಿ 22 ಕೋವಿಡ್ ಸೋಂಕಿತರ ಮೃತದೇಹಗಳನ್ನು ಸಾಗಿಸುತ್ತಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಾಹನದಲ್ಲಿದ್ದ ಈ 22 ಶವಗಳು ಅಂಬಜೋಗೈನ ಸ್ವಾಮಿ ರಾಮಾನಂದ್ ತೀರ್ಥ್ ಮರಾಠವಾಡ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿದ್ದವಾಗಿದೆ. ಕಳೆದ ವರ್ಷ ಕೋವಿಡ್-19 ಮೊದಲ ಅಲೆಯ ವೇಳೆ ಐದು ಆಂಬ್ಯುಲೆನ್ಸ್ ಗಳನ್ನು ಹೊಂದಿದ್ದೆವು. ಅವುಗಳಲ್ಲಿ, ಮೂರನ್ನು ನಂತರ ಹಿಂತೆಗೆದುಕೊಳ್ಳಲಾಯಿತು. ಆಸ್ಪತ್ರೆಯು ಈಗ ಎರಡು ಆಂಬ್ಯುಲೆನ್ಸ್ ಗಳಲ್ಲಿ ಕೊರೊನಾ ರೋಗಿಗಳ ಸಾಗಣೆಯನ್ನು ನಿರ್ವಹಿಸುತ್ತಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶವಗಳನ್ನು ಶವಾಗಾರಕ್ಕೆ ಕೊಂಡೊಯ್ಯಲು ಆಸ್ಪತ್ರೆಯ ಆಡಳಿತವು ಸಾಕಷ್ಟು ಆಂಬ್ಯುಲೆನ್ಸ್ ಗಳನ್ನು ಹೊಂದಿರದ ಕಾರಣ ಇದು ಸಂಭವಿಸಿದೆ ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ.ಶಿವಾಜಿ ಸುಕ್ರೆ ಅವರು ತಿಳಿಸಿದ್ದಾರೆ.