ಕಳಸ : ಜಿಲ್ಲಾಧಿಕಾರಿಗಳು ಅನುಮತಿ ನೀಡಿದ ಕೂಡಲೇ ಹೋಂಸ್ಟೇ ರೆಸಾರ್ಟ್ ತೆರೆಯಲು ಸಿದ್ಧತೆ…

215
firstsuddi

ಕಳಸ : ಸರಕಾರ ನಿಗದಿಪಡಿಸುವ ಮಾನ ದಂಡಗಳ ಜೊತೆಗೆ ಇನ್ನಷ್ಟು ಸ್ವಯಂ ನಿಬಂಧನೆಗಳನ್ನು ಹಾಕಿಕೊಂಡು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ ಕೂಡಲೇ ಹೋಂ ಸ್ಟೇ ರೆಸಾರ್ಟ್‍ಗಳನ್ನು ತೆರೆಯಲು ಸಿದ್ದತೆಯನ್ನು ನಡೆಸಲಾಗಿದೆ.
ಪಟ್ಟಣದಲ್ಲಿ ನಡೆದ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲಿಕರ ಸಭೆಯಲ್ಲಿ ನಿರ್ದಾರ ತೆಗೆದುಕೊಳ್ಳಲಾಗಿದೆ. ಇಲ್ಲಿಯ ಪ್ರವಾಸೋದ್ಯಮವನ್ನು ನಂಬಿಕೊಂಡು ನೂರಾರು ಜನರು ಕಳೆದ ನಾಲ್ಕು ತಿಂಗಳಿನಿಂದ ಉದ್ಯೋಗ ಆದಾಯ ಇಲ್ಲದೆ ಪರದಾಡುತ್ತಿದ್ದಾರೆ. ಜೀಪ್ ಮಾಲಿಕರು, ದಿನಸಿ, ಹಾಲು ಇನ್ನಿತರೆ ಅಂಗಡಿಗಳ ಮಾಲಿಕರು ಕೂಡ ತೊಂದರೆಗೊಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಪ್ರವಾಸೋದ್ಯಮವನ್ನು ಆರಂಭಿಸಿದರೆ ಎಲ್ಲಾ ವರ್ಗದ ಆರ್ಥಿಕ ಪುನಶ್ಚೇತನಕ್ಕೆ ನಾಂದಿ ಹಾಡುವುದು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಸೂಚಿಸಿದ ನಿಭಂದನೆಗಳ ಜೊತೆ ಇನ್ನಷ್ಟು ಸ್ವಯಂ ನಿಬಂಧನೆಗಳನ್ನು ಹಾಕಿಕೊಂಡು ಅಗತ್ಯ ಕ್ರಮಗಳನ್ನು ಕೈಕೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ದರಿಸಲಾಯಿತು.
ಈ ಸಂದರ್ಭದಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲಿಕರಾದ ರವಿರೈ, ಬ್ರಹ್ಮದೇವ, ಅನಿಲ್ ಡಿಸೋಜ, ಎನ್.ಎಂ.ಹರ್ಷ, ಅಭಿನಂದನ್, ರೋಹನ್, ಸಂದೇಶ್, ಶ್ರೀನಿವಾಸ್ ಹೆಬ್ಬಾರ್ ಇತರರು ಇದ್ದರು.