ಕಳಸ : ಮೆಸ್ಕಾಂ ಕಚೇರಿಯ ಕಾಂಪೌಂಡ್ ನ ಗೇಟ್‍ಗೆ ಹಾಕಿದ ಬೀಗವನ್ನು ಒಡೆದು ಸಾರ್ವಜನಿಕರ ಆಕ್ರೋಶ…

487
firstsuddi

ಕಳಸ : ಮೆಸ್ಕಾಂ ಕಚೇರಿಯ ಕಾಂಪೌಂಡ್ ನ ಗೇಟ್‍ಗೆ ಬೀಗವನ್ನು ಹಾಕಿದ ಹಿನ್ನಲೆಯಲ್ಲಿ ಹಾಕಿದ ಬೀಗವನ್ನು ಸಾರ್ವಜನಿಕರು ಒಡೆದು ಹಾಕಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳಸದಲ್ಲಿ ಮೆಸ್ಕಾಂ ಕಚೇರಿಯು ಪ್ರಾರಂಭವಾದ ದಿನದಿಂದಲೂ ಕಳಸ ಬಾಲಕೀಯರ ಶಾಲೆ, ಪ್ರಬೋದಿನಿ ಶಾಲೆ, ಮೆಸ್ಕಾಂ ಇಲಾಖೆಗೆ ಬರಲು ಹಾಗೂ ಮೆಸ್ಕಾಂ ಇಲಾಖೆಯ ಮುಂಭಾಗದಲ್ಲಿರುವ ಕಲಶೇಶ್ವರ ದೇವರ ಕಟ್ಟೆಗೆ ದೇವರು ಬರಲು ಸೂಕ್ತ ಅನುಕೂಲಕರ ರಸ್ತೆಯಿತ್ತು ಮತ್ತು ಅದಕ್ಕೆ ಯಾವುದೇ ಕಾಂಪೌಂಡ್, ಬೇಲಿ ಅಥವಾ ಯಾವುದೇ ಗೇಟ್ ಅಳವಡಿಸಿರಲಿಲ್ಲ.ಆದರೆ ಕಳೆದ ಕೆಲ ತಿಂಗಳ ಹಿಂದೆ ಮೆಸ್ಕಾಂ ಇಲಾಖೆ ಮತ್ತು ಬಾಲಕೀಯ ಶಾಲೆಗೆ ಹೊಂದಿಕೊಂಡಂತೆ ಕಾಂಪೌಂಡ್ ನಿರ್ಮಿಸಿ ಅದಕ್ಕೆ ಗೇಟ್ ಕೂಡ ಅಳಡಿಸಿದರು.ಆದರೆ ಇದಕ್ಕೆ ಯಾವುದೇ ಬೀಗವನ್ನು ಹಾಕಿರಲಿಲ್ಲ.ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಕೂಡ ಆಗುತ್ತಿರಲಿಲ್ಲ.ಆದರೆ ಕಳೆದ ಹತ್ತು ದಿನಗಳಿಂದ ಗೇಟ್‍ಗೆ ಬೀಗ ಹಾಕಿ ಸಾರ್ವಜನಿಕರ ಓಡಾಟಕ್ಕೆ ತಡೆಯೊಡ್ಡಲಾಗಿತ್ತು.ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶುಕ್ರವಾರ ಹಾಕಿದ ಬೀಗವನ್ನು ಹೊಡೆದು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ರವಿ ರೈ ಇಲ್ಲಿಯ ಪ್ರಬೋದಿನಿ ಶಾಲೆಗೆ ಹೊರನಾಡಿನಿಂದ ಅನ್ನದಾನದ ವ್ಯವಸ್ಥೆಯನ್ನು ಮಾಡಿದ್ದಾರೆ.ಅದನ್ನು ವಾಹನದ ಮೂಲಕ ಇದೇ ದಾರಿಯಲ್ಲಿ ತರಬೇಕು ಅಲ್ಲದೆ ಅಕ್ಕ ಪಕ್ಕದಲ್ಲಿರುವ ಶಾಲೆಗಳಿಗೆ ಯಾವುದೇ ವಸ್ತುಗಳನ್ನು ವಾಹನದ ಮೂಲಕ ತರುವುದಾದರೂ ಇದೇ ದಾರಿಯಲ್ಲಿ ತರಬೇಕಾಗಿದೆ. ಇಲ್ಲವಾದರೆ ಮುಖ್ಯ ರಸ್ತೆಯಿಂದ ಹೊತ್ತುಕೊಂಡು ಹೋಗಬೇಕಾಗುತ್ತದೆ.ಅಲ್ಲದೆ ಪ್ರಬೋದಿನಿ ಶಾಲೆ,ಬಾಲಕೀಯರ ಶಾಲೆ,ಎರಡು ಅಂಗನವಾಡಿಗಳಿಗೆ ಬರುವ ಮಕ್ಕಳನ್ನು ಪೋಷಕರು ಈ ದಾರಿಯ ಮುಖಾಂತರ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ..ಆದರೆ ಈಗ ಏಕಾ ಏಕಿ ಗೇಟ್‍ಗೆ ಬೀಗ ಹಾಕಿ ಸಾರ್ವಜನಿಕರಿಗೆ,ಮಕ್ಕಳಿಗೆ ತೊಂದರೆಯನ್ನು ಕೊಡುತ್ತಿದ್ದಾರೆ ಆ ಕಾರಣಕ್ಕಾಗಿ ಗೇಟ್‍ಗೆ ಅಳವಡಿಸಿದ ಬೀಗವನ್ನು ಒಡೆದು ಹಾಕಿದ್ದೇವೆ.ಗೇಟ್ ಅಳವಡಿಸಿದಕ್ಕೆ ನಮ್ಮ ಅಭ್ಯಂತರವಿಲ್ಲ.ಆದರೆ ಗೇಟ್ ಬೀಗ ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಖಂಡಿಸುತ್ತಿದ್ದೇವೆ.ಇನ್ನು ಮುಂದೆಯೂ ಇಲಾಖೆ ಇದೇ ರೀತಿಯ ವರ್ತನೆ ಮುಂದುವರೆಸಿದರೆ ನಾವು ಸುಮ್ನೆ ಇರೋದಿಲ್ಲ ಊರ ಜನರೆಲ್ಲಾ ಒಟ್ಟು ಸೇರಿ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕರವೇ(ಪ್ರವೀಣ್ ಶೆಟ್ಟಿ)ಬಣದ ಅಧ್ಯಕ್ಷ ಸಂತೋಷ್,ಸತೀಶ್,ರಾಜ್‍ಕುಮಾರ್,ಅಣ್ಣಪ್ಪ,ಆನಂದ ಶೆಟ್ಟಿ ಇತರರು ಇದ್ದರು.