ಕಳಸ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರವೇಶಾತಿಗೆ ಅರ್ಜಿ ವಿತರಣೆ…

232
firstsuddi

ಕಳಸ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರವೇಶಕ್ಕೆ ಅರ್ಜಿ ವಿತರಿಸಲಾಗುತ್ತಿದೆ. ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಗೊಳಪಟ್ಟಿರುವ ಕಾಲೇಜಿನಲ್ಲಿ 2020-21ನೇ ಸಾಲಿನಸ್ನಾತಕ ಪದವಿ ಕೋರ್ಸುಗಳ ಆಯ್ಕೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಕಲಾ ವಿಭಾಗದಲ್ಲಿ (ಬಿಎ) ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ (ಹೆಚ್‍ಇಪಿ) ಮತ್ತು ಇತಿಹಾಸ, ಐಚ್ಛಿಕ ಕನ್ನಡ, ಪತ್ರಿಕೋದ್ಯಮ(ಹೆಚ್‍ಕೆಜೆ) ವಿಷಯ ಸಮೂಹಗಳು ಹಾಗೂ ವಾಣಿಜ್ಯಶಾಸ್ತ್ರ(ಬಿ.ಕಾಂ) ವಿಭಾಗದಲ್ಲಿ ವಿಶ್ವವಿದ್ಯಾಲಯದ ಕಡ್ಡಾಯ ವಿಷಯಗಳು ಲಭ್ಯವಿದೆ ಎಂದು ಕಾಲೇಜು ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.