ಕಾಂಗ್ರೆಸ್ ಲಾಂಛನದಲ್ಲಿ ರಾಜಕೀಯ ಹುಡುಕುತ್ತದೆ : ಬೊಮ್ಮಾಯಿ.

57
firstsuddi

ಉಡುಪಿ : ರಾಷ್ಟ್ರ ಲಾಂಛನದ ಬಗ್ಗೆ ಈಗಾಗಲೇ ಸ್ಪಷ್ಟತೆ ಕೊಡಲಾಗಿದೆ. ಸಾರನಾಥದಲ್ಲಿರುವ ಅಶೋಕನ ಕಾಲದಲ್ಲಿರುವ ಲಾಂಛನ ಅನುಕರಿಸಲಾಗಿದೆ. ಆ ಲಾಂಛನದಿಂದಲೇ ಸಿಂಹದ ಮುಖಚರ್ಯೆ ತೆಗೆದುಕೊಳ್ಳಲಾಗಿದೆ. ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ. ವ್ಯಾಘ್ರವಾಗಿದೆಯೋ ಉಗ್ರವಾಗಿದೆಯೋ ಅನ್ನೋದನ್ನ ನಮ್ಮ ದೃಷ್ಟಿಕೋನ ಸೂಚಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷ ಮೊಸರಲ್ಲಿ ಕಲ್ಲು ಹುಡುಕುತ್ತದೆ. ಸಾರನಾಥ ಮಾದರಿಯನ್ನು ಯಥಾವತ್ತು ಮಾಡಲಾಗಿದೆ. ಕಾಂಗ್ರೆಸ್ ನೋಡುವ ದೃಷ್ಟಿ ಬೇರೆ, ನಾವು ನೋಡುವ ದೃಷ್ಟಿ ಬೇರೆ. ಕಾಂಗ್ರೆಸ್ ಇದರಲ್ಲಿ ರಾಜಕೀಯ ಹುಡುಕುತ್ತದೆ. ನಮ್ಮಲ್ಲಿ ಕ್ರಿಯಾಶೀಲವಾದ ಪ್ರಧಾನಿ ಇದ್ದಾರೆ. ಸಿಂಹ ಹೇಗೆ ಸಶಕ್ತವಾಗಿ ಘರ್ಜನಾ ರೂಪದಲ್ಲಿರಬೇಕೋ ಅದು ನಮ್ಮ ಸಿಂಹ. ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದ್ದಾರೆ. ಕಾಂಗ್ರೆಸ್ ನ ಸಂಸ್ಕೃತಿ ಹೇಗೋ ಈ ಸಿಂಹ ಹಾಗೆಯೇ ಕಾಣುತ್ತದೆ ಎಂದು ಎಂದರು.