ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಚಿತ್ರಮಂದಿರದಲ್ಲಿ ಅಬ್ಬರಿಸಿ ಈಗ ಒಟಿಟಿಯಲ್ಲೂ ಸದ್ದು ಮಾಡುತ್ತಿದೆ. ಇನ್ನು ‘ಕಾಂತಾರ’ ಚಿತ್ರದ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದೀಗ ಕಾಂತಾರ ಚಿತ್ರ ವೀಕ್ಷಣೆ ಮಾಡಿರುವ ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಷನ್ ಅವರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾವನ್ನು ನೋಡಿ ಸಾಕಷ್ಟು ವಿಷಯ ಕಲಿತುಕೊಂಡೆ. ರಿಷಬ್ ಶೆಟ್ಟಿ ಅವರಿಂದಾಗಿ ಈ ಸಿನಿಮಾ ಅಸಾಧಾರಣ ಎನಿಸಿಕೊಂಡಿದೆ. ನಿರೂಪಣೆ, ನಟನೆ ಮತ್ತು ನಿರ್ದೇಶನ ಅತ್ಯುತ್ತಮವಾಗಿದೆ. ಕ್ಲೈಮ್ಯಾಕ್ಸ್ ನಲ್ಲಿ ಕಂಡ ಬದಲಾವಣೆಯಿಂದ ನನಗೆ ರೋಮಾಂಚನ ಆಯಿತು. ಇಡೀ ತಂಡಕ್ಕೆ ನನ್ನ ಗೌರವ ಮತ್ತು ಅಭಿನಂದನೆಗಳು ಎಂದು ಹೃತಿಕ್ ರೋಷನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.










