ಮುಂಬೈ : ಪಿಕ್‍ನಿಕ್ ಮುಗಿಸಿ ವಾಪಸ್ ಆಗುತ್ತಿದ್ದ ಶಾಲಾ ಬಸ್ ಪಲ್ಟಿಯಾಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖೋಪೋಲಿ ಎಂಬಲ್ಲಿ ನಡೆದಿದೆ.
ಮುಂಬೈನ ಚೆಂಬೂರ್ ನಲ್ಲಿರುವ ಕೋಚಿಂಗ್ ಕೇಂದ್ರದ 10ನೇ ತರಗತಿಯ 48 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಪ್ರಯಾಣಿಸುತ್ತಿದ್ದ ಬಸ್ ಲೋನಾವಾಲಾದಿಂದ ಹಿಂತಿರುಗುತ್ತಿತ್ತು. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮುಂಬೈ-ಪುಣೆ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬೆಟ್ಟದಿಂದ ಇಳಿಯುತ್ತಿದ್ದ ವೇಳೆ ಬಸ್ ಪಲ್ಟಿಯಾಗಿದೆ.
ಮೃತ ವಿದ್ಯಾರ್ಥಿಗಳನ್ನು ಚೆಂಬೂರ್ ಕ್ಯಾಂಪ್ ನಿವಾಸಿ ಹಿತಿಕಾ ಖನ್ನಾ (16) ಮತ್ತು ಉಪನಗರ ಘಾಟ್ ಕೋಪರ್ ನ ಅಸಲ್ಫಾ ಗ್ರಾಮದ ನಿವಾಸಿ ರಾಜ್ ರಾಜೇಶ್ ಮಾತ್ರೆ (16) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಚಾಲಕನಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.










