ಕಾಳಿ ಸ್ವಾಮಿ ಮುಖಕ್ಕೆ ಮಸಿ ; ಕಾನೂನು ಹೋರಾಟ ಮಾಡುತ್ತೇನೆ ಅಂದ್ರು ಸ್ವಾಮೀಜಿ.

77
firstsuddi

ಬೆಂಗಳೂರು : ನಗರದ ಮಲ್ಲೇಶ್ವರಂನ ಗಂಗಮ್ಮ ದೇವಾಲಯದಲ್ಲಿ ಕಾಳಿಕಾ ಸಂಘಟನೆಯಿಂದ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಈ ಪೂಜೆಗೆ ಕಾಳಿ ಮಠದ ರಿಷಿ ಕುಮಾರ ಸ್ವಾಮೀಜಿ ಆಗಮಿಸಿದ್ದರು. ಪೂಜೆ ಮುಗಿಸಿ ಹೊರಬರುತ್ತಿದ್ದ ಕಾಳಿ ಸ್ವಾಮಿಗೆ ಗುಂಪೊಂದು ಏಕಾಏಕಿ ಮಸಿ ಬಳಿದಿದೆ.

ಇನ್ನುಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಕಾಳಿ ಸ್ವಾಮಿ, ನಾನು ಕುವೆಂಪು ಮತ್ತು ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಒಂದು ವೇಳೆ ನಾನು ಆ ರೀತಿಯ ಹೇಳಿಕೆ ನೀಡಿದ್ರೆ ಸಾಬೀತು ಮಾಡಲಿ ಎಂದು ಕಾಳಿ ಸ್ವಾಮಿ ಬಹಿರಂಗ ಸವಾಲು ಹಾಕಿದ್ದಾರೆ.

ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಅನಾಮಧೇಯ ವ್ಯಕ್ತಿಗಳು ಸಂಘಟನೆ ಹೆಸರು ಹೇಳಿಕೊಂಡು ಕ್ಷುಲ್ಲಕ ಕಾರಣಕ್ಕೆ ಮಸಿ ಬಳಿದಿದ್ದಾರೆ. ಮಸಿ ಬಳಿದಿರುವ ಕುರಿತು ಕಾಳಿಕಾ ಸೇನೆಯ ಕಾರ್ಯದರ್ಶಿಗಳು ಅನಾಮಧೇಯರ ವಿರುದ್ಧ ದೂರು ನೀಡಲಿದ್ದಾರೆ ಎಂದು ಹೇಳಿದ್ದಾರೆ. ಇದೊಂದು ಪೂರ್ವಯೋಜಿತ ದಾಳಿ ಎಂದು ಕಾಳಿ ಸ್ವಾಮಿ ಆರೋಪಿಸಿದ್ದಾರೆ.