ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಪೈರಸಿ ಮಾಡಿದ್ದ ಆರೋಪಿ ಬಂಧನ…

486
firstsuddi

ಬೆಂಗಳೂರು : ನಟ ಕಿಚ್ಚ ಸುದೀಪ್ ಅಭಿನಯದ “ಪೈಲ್ವಾನ್” ಸಿನಿಮಾವನ್ನು ಪೈರೆಸಿ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಕೇಶ್ ಅಲಿಯಾಸ್ ವಿರಾಟ್ ಬಂಧಿತ ಆರೋಪಿ. ರಾಕೇಶ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಪೈಲ್ವಾನ್ ಚಿತ್ರದ ಲಿಂಕ್ ಅನ್ನು ಶೇರ್ ಮಾಡಿದ್ದು, ಈ ಬಗ್ಗೆ ಕಳೆದ 2ದಿನದ ಹಿಂದೆ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಚಿತ್ರ ಬಿಡುಗಡೆಯಾದ ದಿನವೇ ಪೈಲ್ವಾನ್ ಚಿತ್ರದ ಪೈರಸಿಯಾಗಿದೆ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ದೂರನ್ನು ದಾಖಲಿಸಿದ್ದರು. ದೂರನ್ನು ದಾಖಲಿಸಿಕೊಂಡ ಸಿಸಿಬಿ ಪೊಲೀಸರು ತನಿಖೆ ನಡೆಸಿ ನೆಲಮಂಗಲದ ಹಿಮಚೇನಹಳ್ಳಿಯಲ್ಲಿ ಆರೋಪಿ ರಾಕೇಶ್‍ನನ್ನು ಬಂಧಿಸಿದ್ದಾರೆ.