ಕೊಟ್ಟಿಗೆಹಾರ : ಕುಸಿಯುವ ಬೀತಿಯಲ್ಲಿ ಕೆಳಗೂರಿನ ನ್ಯಾಯಬೆಲೆ ಅಂಗಡಿ-ಸ್ಥಳಾಂತರಿಸುವಂತೆ ಗ್ರಾಮಸ್ಥರ ಒತ್ತಾಯ…

313
firstsuddi

ಕೊಟ್ಟಿಗೆಹಾರ: ಜಾವಳಿ ಗ್ರಾ.ಪಂ ವ್ಯಾಪ್ತಿಯ ಕೆಳಗೂರಿನ ನ್ಯಾಯಬೆಲೆ ಅಂಗಡಿಯ ಕಟ್ಟಡ ಕುಸಿಯುವ ಹಂತದಲ್ಲಿದ್ದು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೆಳಗೂರು ಗ್ರಾಮಸ್ಥ ಉಮೇಶ್ ಮಾತನಾಡಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿಯೆ ಪಡಿತರದಾರರಿಗೆ ನೀಡುವ ದಾನ್ಯಗಳನ್ನು ಇಡಲಾಗಿದೆ. ಶಿಥಿಲಾವಸ್ಥೆಯ ಕಟ್ಟಡದಲ್ಲಿಯೆ ನಿಂತು ಪಡಿತರದಾರರು ಪಡಿತರವನ್ನು ಪಡೆಯಬೇಕಾಗಿದ್ದು ಶಿಥಿಲಾವಸ್ಥೆಯ ಕಟ್ಟಡ ಬೀಳುವ ಆತಂಕದಲ್ಲಿ ಪಡಿತರದಾರರು ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆಯಬೇಕಿದೆ. ಕಳೆದ ಬಾರಿಯ ಮಳೆಗಾಲದಲ್ಲಿ ನ್ಯಾಯಬೆಲೆ ಅಂಗಡಿಯ ಅಕ್ಕಪಕ್ಕದ ಕಟ್ಟಡಗಳು ಕುಸಿದು ಹೋಗಿದ್ದು ನ್ಯಾಯಬೆಲೆ ಅಂಗಡಿಯನ್ನು ಸ್ಥಳಾಂತರಿಸದೇ ಇದ್ದರೆ ಈ ಕಟ್ಟಡ ಕುಸಿಯುವ ಸಾದ್ಯತೆ ಇದ್ದು ನ್ಯಾಯಬೆಲೆ ಅಂಗಡಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಲ್ಲೂಕು ಆರೋಗ್ಯ ನಿರೀಕ್ಷಕ ಇಂದ್ರೇಶ್, ಈ ವಿಷಯ ನನ್ನ ಗಮನಕ್ಕೆ ಬಂದಿರಲಿಲ್ಲ.  ಈ ತಿಂಗಳ ಆಹಾರ ವಿತರಣೆ ಮುಗಿದ ಕೂಡಲೇ ಬೇರೆ ಕಟ್ಟಡಕ್ಕೆ ನ್ಯಾಯಬೆಲೆ ಅಂಗಡಿಯನ್ನು ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.