ಕೊಟ್ಟಿಗೆಹಾರ : ಬ್ಯಾಂಕ್ ಗ್ರಾಹಕರಿಗೆ ವರವಾದ ಸಂಚಾರಿ ಬ್ಯಾಂಕ್ ಸೇವೆ…

396
firstsuddi

ಕೊಟ್ಟಿಗೆಹಾರ: ಜನ್‍ಧನ್, ಕಿಸಾನ್ ಯೋಜನೆ, ವೃದ್ಧಾಪ್ಯ ಮಾಸಾಶನ ಪಡೆಯಲು ಜನರು ಬ್ಯಾಂಕ್‍ಗಳಿಗೆ ಹೋಗದೆ ಸಂಚಾರಿ ಬ್ಯಾಂಕ್ ಮಿತ್ರ ಸೇವೆ ಜನರಿಗೆ ವರದಾನವಾಗಿದೆ.
ಕೊಟ್ಟಿಗೆಹಾರದ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಪಿಗ್ಮಿಸೇವೆ ಲಾಕ್‍ಡೌನ್ ಸಂದರ್ಭದಲ್ಲಿ ವರದಾನವಾಗಿದ್ದು ಈ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಪಿಗ್ಮಿ ಏಜೆಂಟ್‍ಗಳ ಬಳಿ ಇರುವ ಬೆರಳಚ್ಚು ಯಂತ್ರದಲ್ಲಿ ಬೆರಳಚ್ಚು ನೀಡುವ ಮೂಲಕ ಹಣವನ್ನು ಡ್ರಾ ಮಾಡಲು ಖಾತೆಗೆ ಕಟ್ಟಲು ಸಾಧ್ಯವಾಗುತ್ತದೆ. ಆರ್‍ಟಿಜಿಎಸ್ ಮೂಲಕವೂ ಹಣ ವರ್ಗಾಯಿಸಬಹುದು. ಆದರೆ ಸೇವೆ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೊಟ್ಟಿಗೆಹಾರ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪಿಗ್ಮಿ ಕಲೆಕ್ಟರ್ ಯಶವಂತ್ ತರುವೆ, ಬ್ಯಾಂಕ್ ಗ್ರಾಹಕರು ಬಯೊಮೆಟ್ರಿಕ್ ಸಹಾಯದಿಂದ ಹಣ ಕಟ್ಟುವುದು ಮತ್ತು ಬ್ಯಾಂಕ್ ಖಾತೆಗೆ ಹಣ ಹಾಕುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಈ ಮಾರ್ಗ ಸಹಾಯಕ ಎಂದರು.