ಕೊರೊನಾ ವೈರಸ್ ತಗುಲಿರಬಹುದು ಎಂಬ ಭಯದಿಂದ ಗುಂಡು ಹಾರಿಸಿಕೊಂಡು ಸಿ.ಆರ್.ಪಿ.ಎಫ್ ಅಧಿಕಾರಿ ಆತ್ಮಹತ್ಯೆ…

182
firstsuddi

ಶ್ರೀನಗರ : ಭಾರತೀಯ ಸೇನೆಯ ಸಿ.ಆರ್.ಪಿ.ಎಫ್ ಹಾಗೂ ಬಿ.ಎಸ್.ಎಫ್ ಯೋಧರಿಗೂ ಮಹಾಮಾರಿ ಕೊರೊನಾ ವೈರಸ್ ತಗುಲಿದ್ದು, ಇದರಿಂದ ಆತಂಕಗೊಂಡ ಸಿ.ಆರ್.ಪಿ.ಎಫ್ ಅಧಿಕಾರಿಯೊಬ್ಬರು ತನಗೂ ಸೋಂಕು ತಲುಗಬಹುದು ಎಂಬ ಭಯದಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನದ ಜೈಸಲ್ಮೇರ್ ನಿವಾಸಿ ಫತಾಹ್ ಸಿಂಗ್ ಆತ್ಮಹತ್ಯೆಗೆ ಶರಣಾದ ಅಧಿಕಾರಿ ಎಂದು ಗುರುತಿಸಲಾಗಿದ್ದು, ಅನಂತ್‍ನಾಗ್ ಜಿಲ್ಲೆಯ ಮಟ್ಟನ್ ಪ್ರದೇಶದಲ್ಲಿ ಸಿ.ಆರ್.ಪಿ.ಎಫ್‍ನ 49ನೇ ಬೆಟಾಲಿಯನ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು, ನನಗೆ ಕೊರೊನಾ ವೈರಸ್ ತಗುಲಿರುವ ಭಯ ಕಾಡುತ್ತಿದೆ ಎಂದು ಡೆತ್‍ನೋಟ್ ಬರೆದಿಟ್ಟು ತಮ್ಮ ಬಳಿ ಇದ್ದ ರೈಫಲ್‍ನಿಂದ ಗುಂಡು ಹಾರಿಸಿಕೊಂಡಿದ್ದರು. ಬಳಿಕ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅವರ ಗಂಟಿಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.