ಕೊಲೆ ಯತ್ನ ಪ್ರಕರಣ : ಲೋಕಸಭಾ ಸದಸ್ಯತ್ವದಿಂದ ಲಕ್ಷದ್ವೀಪ ಸಂಸದ ಅನರ್ಹ…

52
firstsuddi

ನವದೆಹಲಿ : ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

2009ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿಎಂ ಸಯೀದ್ ಅವರ ಅಳಿಯ ಮೊಹಮ್ಮದ್ ಸಾಲಿಹ್ ಅವರನ್ನು ಕೊಲ್ಲಲು ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕವರಟ್ಟಿಯ ಸೆಷನ್ಸ್ ನ್ಯಾಯಾಲಯವು ಇತ್ತೀಚೆಗೆ ತೀರ್ಪನ್ನು ಪ್ರಕಟಿಸಿತ್ತು.

ಈ ತೀರ್ಪಿನ ಅನ್ವಯ ಮೊಹಮ್ಮದ್ ಫೈಜಲ್ ನನ್ನು ದೋಷಿ ಎಂದು ತಿಳಿಸಿದೆ. ಫೈಝಲ್ ಸೇರಿದಂತೆ ನಾಲ್ವರು ಕೊಲೆ ಯತ್ನ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಕೊಲೆ ಯತ್ನ ಪ್ರಕರಣದ ದೋಷಿಯಾಗಿರುವ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.