ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ವಕೀಲ ಜಗದೀಶ್ ಅವರು, ಸಂತ್ರಸ್ತೆ ಯುವತಿ ಇಂದು ಕೋರ್ಟ್ ಗೆ ಬರುವ ಎಲ್ಲಾ ಸಾಧ್ಯತೆಗಳಿರುವುದರಿಂದ ಕೋರ್ಟ್ ನ ಅನುಮತಿ ಸಿಕ್ಕರೆ ಇವತ್ತೇ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಯುವತಿಯನ್ನು ಹಾಜರುಪಡಿಸುತ್ತೇವೆ ಎಂದು ಹೇಳಿದ್ದಾರೆ.
ಸಿಡಿಯಲ್ಲಿದ್ದ ಯುವತಿ ನನಗೆ ಹಾಗೂ ನನ್ನ ಪೋಷಕರಿಗೆ ರಕ್ಷಣೆ ಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಇ- ಮೇಲ್ ಮೂಲಕ ಪತ್ರ ಬರೆದಿದ್ದಾರೆ. ಆ ಯುವತಿ ಎಲ್ಲಾ ಹೇಳಿಕೆಯನ್ನು ನ್ಯಾಯಮೂರ್ತಿಗಳ ಮುಂದೆ ಹೇಳಲು ಸಿದ್ಧರಾಗಿದ್ದು, ಯುವತಿಗೆ ರಕ್ಷಣೆ ನೀಡಬೇಕಾಗಿದೆ. ಕೋರ್ಟ್ ನ ವಾತಾವರಣವನ್ನು ನೋಡಿಕೊಂಡು ಇಂದು ಯುವತಿ ಕೋರ್ಟ್ ಗೆ ಬರುತ್ತಾರೆ. ನಮ್ಮ ಕಡೆಯಿಂದ ನ್ಯಾಯವನ್ನು ತಂದುಕೊಡುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ. ಇಂದು ಕೋರ್ಟ್ ನ ಅನುಮತಿ ಪಡೆದು ಸಂತ್ರಸ್ತೆ ಯುವತಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರು ಪಡಿಸುತ್ತೇವೆ ಎಂದು ಹೇಳಿದ್ದಾರೆ.










