ಕೋವಿಡ್ ಬಗ್ಗೆ ದಯವಿಟ್ಟು ಯಾರು ಗಾಬರಿ ಆಗುವುದು ಬೇಡ: ಡಿ.ಕೆ ಶಿವಕುಮಾರ್.

63
firstsuddi

ನವದೆಹಲಿ: ಕೋವಿಡ್ ಬಗ್ಗೆ ದಯವಿಟ್ಟು ಯಾರು ಗಾಬರಿ ಆಗುವುದು ಬೇಡ, ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜನರು ಮಾಸ್ಕ್ ಹಾಕಲು ಆರಂಭಿಸಿದ್ದಾರೆ. ಕೊರೊನಾ ಹೆಚ್ಚಾಗುತ್ತಿದೆ ಎಂದುಕೊಳ್ಳಬೇಡಿ ಎಂದು ಮನವಿ ಮಾಡಿದರು.

ಇನ್ನು ದೆಹಲಿ ಭೇಟಿಯ ಬಗ್ಗೆ ಮಾತನಾಡಿದ ಅವರು, ಪಕ್ಷದ ಕೆಲ ವರಿಷ್ಠರನ್ನು ಭೇಟಿ ಮಾಡಲು ಬಂದಿದ್ದೇವೆ. ಕೆಲವು ಕೇಂದ್ರ ಸಚಿವರ ಭೇಟಿಗೂ ಸಮಯ ಕೇಳಿದ್ದೇವೆ. ಮುಖ್ಯಮಂತ್ರಿಗಳಿಗೆ ಪಿಎಂ ಅವರು ಸಮಯ ನೀಡಿದ್ದಾರೆ. ನಾನು ಸಹ ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇನೆ. ನಿರ್ಮಲಾ ಸೀತಾರಾಮನ್ ಅವರನ್ನು ನಾನು ಭೇಟಿಯಾಗಲು ಕೇಳಿದ್ದೇನೆ. ಆದರೆ ಸಮಯ ಇನ್ನು ನಿಗದಿ ಆಗಿಲ್ಲ ಎಂದರು.