ಖ್ಯಾತ ಕಿರುತೆರೆ ನಟ ಆತ್ಮಹತ್ಯೆ.. ಕಾರಣ

83
firstsuddi

ಖ್ಯಾತ ತಮಿಳು ಕಿರುತೆರೆ ನಟ ಲೋಕೇಶ್ ರಾಜೇಂದ್ರನ್(34) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸೊಸೆ ಹಾಗೂ ಮಗನ ನಡುವೆ ಕೆಲವು ತಪ್ಪು ತಿಳುವಳಿಕೆಗಳು ಇದ್ದವು. ಈ ಕಾರಣದಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ ಲೋಕೇಶ್ ತಂದೆ ರಾಜೇಂದ್ರನ್.

ಮರ್ಮದೇಶಂ ಧಾರಾವಾಹಿಯ ಮೂಲಕ ಬಾಲ ಕಲಾವಿದನಾಗಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಲೋಕೇಶ್, 150ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಸುಮಾರು 15 ಸಿನಿಮಾಗಳಲ್ಲಿ ಲೋಕೇಶ್ ರಾಜೇಂದ್ರನ್ ನಟಿಸಿದ್ದರು. ಲೋಕೇಶ್ ರಾಜೇಂದ್ರನ್ ನಿಧನಕ್ಕೆ ತಮಿಳು ಕಿರುತೆರೆಯ ಸೆಲೆಬ್ರಿಟಿಗಳು, ಸೀರಿಯಲ್ ವೀಕ್ಷಕರು ಕಂಬನಿ ಮಿಡಿಯುತ್ತಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಲೋಕೇಶ್ ತಂದೆ, ಲೋಕೇಶ್ ಮತ್ತು ಅವನ ಹೆಂಡತಿ ನಡುವೆ ಏನೋ ವೈಮನಸ್ಸು ಮೂಡಿದೆ ಅಂತ ನನಗೆ ಒಂದು ತಿಂಗಳ ಹಿಂದೆ ಗೊತ್ತಾಯಿತು. ನಾಲ್ಕು ದಿನಗಳ ಹಿಂದೆ ಆತನ ಹೆಂಡತಿಯಿಂದ ಡಿವೋರ್ಸ್​ಗಾಗಿ ಲೀಗಲ್ ನೋಟಿಸ್ ಬಂದಿತ್ತು. ಕಳೆದ ಶುಕ್ರವಾರ ಆತನನ್ನು ನಾನು ನೋಡಿದ್ದೆ. ಖಿನ್ನತೆಗೆ ಒಳಗಾಗಿದ್ದ. ಸ್ವಲ್ಪ ಹಣ ಬೇಕು ಅಂತ ಕೇಳಿದ್ದ. ನಾನು ಕೊಟ್ಟಿದ್ದೆ. ಎಡಿಟರ್ ಆಗಿ ಹೊಸ ಕೆಲಸ ಮಾಡುವುದಾಗಿ ಆತ ತಿಳಿಸಿದ್ದ ಎಂದು ಹೇಳಿದ್ದಾರೆ. ಲೋಕೇಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.