ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಂತಾಪ ಸೂಚಿಸಿದ ಸಾಂಸ್ಕೃತಿಕ ಸಂಘ.

111
firstsuddi

ಚಿಕ್ಕಮಗಳೂರು : ನಾಡು ಕಂಡ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಕ್ಕೆ ಸಾಂಸ್ಕೃತಿಕ ಸಂಘ ತೀವ್ರ ಸಂತಾಪ ಸೂಚಿಸಿದೆ.

ತಮ್ಮ ಕಂಚಿನ ಕಂಠದ ಗಾಯನದ ಮೂಲಕ ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಹಿರಿಯ ಗಾಯಕ ಸುಬ್ಬಣ್ಣ ಅವರ ನಿಧನದಿಂದಾಗಿ ನಾಡಿನ ಸಂಗೀತ ಕ್ಷೇತ್ರದ ಮಹತ್ವದ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಸಂಘದ ಕಾರ್ಯದರ್ಶಿ ಉಜ್ವಲ್ ಡಿ. ಪಡುಬಿದ್ರಿ ಶೋಕಿಸಿದ್ದಾರೆ.

ಡಾ| ಚಂದ್ರಶೇಖರ ಕಂಬಾರರ ‘ಕಾಡುಕುದುರೆ ಓಡಿ ಬಂದಿತ್ತಾ’ ಸಂತ ಶಿಶುನಾಳ ಶರೀಫರ ‘ಹಾಕಿದ ಜನಿವಾರವ ಸದ್ಗುರುನಾಥ ಗೀತೆಗಳು’ ಸೇರಿದಂತೆ ಸುಬ್ಬಣ್ಣ ಅವರು ಹಾಡಿರುವ ಹಾಡುಗಳು ಅವಿಸ್ಮರಣೀಯವಾಗಿವೆ. ಅವರ ಕಂಚಿನ ಕಂಠದಿಂದ ಮೂಡಿಬಂದ ಹಾಡುಗಳನ್ನು ಎಂದಿಗೂ ಮರೆಯಲಾಗದು ಎಂದು ತಿಳಿಸಿದ್ದಾರೆ.