ಗಂಡು ಮಗುವಿಗೆ ಜನ್ಮ ನೀಡಿದ ನಟಿ ರಾಧಿಕ ಪಂಡಿತ್…

661
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ನಟ ಯಶ್ ಹಾಗೂ ನಟಿ ರಾಧಿಕ ಪಂಡಿತ್ ಎರಡನೇ ಮಗುವಿಗೆ ತಂದೆ-ತಾಯಿಯಾಗಿದ್ದು, ರಾಧಿಕ ಪಂಡಿತ್ ಅವರು ಇಂದು ಮುಂಜಾನೆ ಗಂಡು ಮಗುವಿಗೆ ಜನ್ಮ ನೀಡಿದ್ದು, ರಾಕಿಂಗ್ ಸ್ಟಾರ್​ ಯಶ್ ಕುಟುಂಬಕ್ಕೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ರಾಧಿಕ ಪಂಡಿತ್ ಅವರನ್ನು ಇಂದು ಬೆಳಿಗ್ಗೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ರಾಧಿಕ ಪಂಡಿತ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ರಾಕಿಂಗ್ ಕುಟುಂಬದ ಮೂಲಗಳು ತಿಳಿಸಿವೆ. ಯಶ್​ ಮನೆಗೆ ಜೂನಿಯರ್ ಯಶ್ ಆಗಮನದಿಂದ ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ​