ಗಣೇಶ ವಿಸರ್ಜನೆ ವೇಳೆ ದೋಣಿ ಪಲ್ಟಿಯಾಗಿ 11 ಮಂದಿ ನೀರುಪಾಲು…

256
firstsuddi

ಭೋಪಾಲ್ : ಗಣೇಶ ವಿಸರ್ಜನೆ ವೇಳೆಯಲ್ಲಿ ದೋಣಿ ಪಲ್ಟಿಯಾಗಿ 11 ಮಂದಿ ನೀರುಪಾಲಾಗಿರುವ ಘಟನೆ ಮಧ್ಯಪ್ರದೇಶದ ಖಟ್ಲಾಪುರ ಘಾಟ್ ಬಳಿ ನಡೆದಿದೆ. ಇಂದು ಬೆಳಿಗ್ಗೆ 4:30ರ ಸುಮಾರಿಗೆ ಗಣೇಶ ವಿಸರ್ಜನೆ ಮಾಡಲೆಂದು 16 ಮಂದಿ ದೋಣಿಯಲ್ಲಿ ತೆರಳಿದ್ದು, ಈ ವೇಳೆ ಆಕಸ್ಮಿಕವಾಗಿ ದೋಣಿ ಪಲ್ಟಿಯಾದ ಪರಿಣಾಮ 16 ಮಂದಿ ನೀರಿಗೆ ಬಿದ್ದಿದ್ದು, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಕಾರ್ಯಾಚರಣೆ ತಂಡ 16 ಮಂದಿಯಲ್ಲಿ 5 ಮಂದಿಯನ್ನು ರಕ್ಷಣೆ ಮಾಡಿದ್ದು, 11ಮಂದಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ನಿರ್ದೇಶಕ ಅಖಿಲ್ ಪಟೇಲ್ ಅವರು ತಿಳಿಸಿದ್ದಾರೆ. ಮಧ್ಯ ಪ್ರದೇಶದ ಸಚಿವ ಪಿ.ಸಿ. ಶರ್ಮಾ ಅವರು ಮೃತರ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರವನ್ನು ಘೋಷಿಸಿದ್ದಾರೆ.