ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ ಹೃತಿಕ್ ರೋಷನ್.

67
firstsuddi

ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಇಬ್ಬರೂ ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಸದ್ಯ ಹೃತಿಕ್, ಪ್ರೇಯಸಿ ಸಬಾ ಜೊತೆ ವಾಸಿಸಲು ಮದುವೆಗೂ ಮುನ್ನವೇ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದನ್ನು ಖರೀದಿಸಿದ್ದಾರೆ.

ಮೂಲಗಳ ಪ್ರಕಾರ ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಇಬ್ಬರೂ ಒಟ್ಟಿಗೆ ಇರಲು ಬಯಸಿದ್ದು ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರಂತೆ. ಇಬ್ಬರೂ ಹೊಸ ಮನೆಗೆ ಸದ್ಯದಲ್ಲೇ ಶಿಫ್ಟ್ ಆಗುತ್ತಿದ್ದಾರೆ ಎನ್ನಲಾಗಿದೆ. ಮುಂಬೈನ ಜುಹು – ವರ್ಸೋವ ರಸ್ತೆಯಲ್ಲಿ ಹೃತಿಕ್ ಮತ್ತು ಸಬಾ ಹೊಸ ಮನೆ ಇದ್ದು 3 ಫ್ಲೋರ್ ಇರುವ ಅಪಾರ್ಟ್‌ಮೆಂಟ್‌ ಇದಾಗಿದೆ. ಬರೋಬ್ಬರಿ 100 ಕೋಟಿ ರೂಪಾಯಿಗೆ ಈ ಹೊಸ ಮನೆ ಖರೀದಿ ಮಾಡಿದ್ದಾರಂತೆ ಹೃತಿಕ್. ಹೊಸ ಅಪಾರ್ಟ್‌ಮೆಂಟ್‌ ಸಮುದ್ರದ ಅದ್ಭುತ ನೋಟವನ್ನು ಹೊಂದಿದ್ದು 15 ಮತ್ತು 16 ನೇ ಫ್ಲೋರ್ ಡ್ಯುಪ್ಲೆಕ್ಸ್ ಹಾಗೂ ಮತ್ತೊಂದು ಫ್ಲೋರ್ ಇದೆಯಂತೆ. ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿರುವುದು ನೋಡಿದ್ರೆ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಸಬಾ ಗಾಯಕಿ, ಸಂಗೀತಗಾರ್ತಿಯಾಗಿ ಖ್ಯಾತಿ ಗಳಿಸಿದ್ದಾರೆ. ಗಾಯನದ ಜೊತೆಗೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೊನೆಯದಾಗಿ ಸಬಾ ರಾಕೆಟ್ ಬಾಯ್ಸ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಹೃತಿಕ್ ರೋಷನ್ ಕೊನೆಯದಾಗಿ ವಿಕ್ರಮ್ ವೇದ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಸೈಪ್ ಅಲಿ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.