ಗುಂಡೇಟಿಗೆ ಬಲಿಯಾದ 24 ವರ್ಷದ ಯುವಕ…

147
firstsuddi

ಹಾಸನ : ಸ್ನೇಹಿತರ ಜೊತೆ ಶಿಕಾರಿಗೆಂದು ಅರಣ್ಯಕ್ಕೆ ತೆರಳಿದ್ದ ವೇಳೆ ಗುಂಡೇಟು ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಬೇಲೂರು ತಾಲ್ಲೂಕು ಕುಶಾವರ ಗ್ರಾಮದ ಮಧು (24) ಮೃತ ಯುವಕ.

ಜಿಲ್ಲೆಯ ಬೇಲೂರು ತಾಲ್ಲೂಕಿನ ಕಲ್ಲಹಳ್ಳಿ ಫಾರೆಸ್ಟ್ ನಲ್ಲಿ ಈ ಘಟನೆ ಸಂಭವಿಸಿದ್ದು, ಮೃತ ಮಧು ನಿನ್ನೆ ಸಂಜೆ ತನ್ನ ಸ್ನೇಹಿತರ ಜೊತೆಗೆ ಶಿಕಾರಿಗೆಂದು ತೆರಳಿದ್ದ. ಈ ವೇಳೆ ಆತನಿಗೆ ಗುಂಡೇಟು ತಗುಲಿದೆ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಧುವನ್ನು ಕೂಡಲೇ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸ್ನೇಹಿತರು ಪರಾರಿಯಾಗಿದ್ದಾರೆ. ಆದರೆ ಇಂದು ಚಿಕಿತ್ಸೆ ಫಲಿಸದೆ ಮಧು ಸಾವನ್ನಪ್ಪಿದ್ದಾನೆ.

ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಶಿಕಾರಿಗೆ ತೆರಳಿದ್ದಾಗ ಮಿಸ್ ಆಗಿ ಮಧು ಮೇಲೆ ಫೈರ್ ಆಗಿದೆಯೋ, ಅಥವಾ ಸ್ನೇಹಿತರೇ ಕೊಲೆ ಮಾಡಲು ಗುಂಡು ಹಾರಿಸಿದ್ದಾರೋ ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.