ನವದೆಹಲಿ : ಪ್ರತಿ ಎಲ್ಪಿಜಿ ಸಿಲಿಂಡರ್ ದರ 15 ರೂಪಾಯಿ ಏರಿಕೆ ಮಾಡಲಾಗಿದ್ದು, ಈ ಮೂಲಕ ತಿಂಗಳ ಮೊದಲ ವಾರದಲ್ಲಿ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳ ಮಾಡಿದಂತಾಗಿದೆ.
ದೇಶದಾದ್ಯಂತ ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ಮೂಲಕ ಗೃಹಬಳಕೆ ಸಿಲಿಂಡರ್ ದರ 900ರ ಸಮೀಪಕ್ಕೆ ಬಂದಿದೆ. ಈಗಾಗಲೇ ಸಿಲಿಂಡರ್ ದರ 15 ರೂ ಏರಿಕೆ ಬಳಿಕ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ 899.50 ರೂ ಆಗಿದೆ. ಸದ್ಯಕ್ಕೆ 5 ಕೆಜಿ ಸಿಲಿಂಡರ್ ನಿಮಗೆ 502 ರೂ.ಗೆ ಲಭ್ಯವಾಗಲಿದೆ. ಇನ್ನೂ ಬೆಂಗಳೂರಿನಲ್ಲಿ 14.2 ಕೆಜಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ರೂ. 903.19 ಇದೆ. 5 ಕೆ.ಜಿ ಸಿಲಿಂಡರ್ ಗೃಹ ಬಳಕೆ ದರ 333.19 ರೂ. ಇದೆ.
ಇದರೊಂದಿಗೆ ಪೆಟ್ರೋಲ್,ಡೀಸೆಲ್ ಬೆಲೆಯಲ್ಲೂ ಏರಿಕೆ ಕಂಡಿದೆ. ಪೆಟ್ರೋಲ್ ಲೀಟರ್ಗೆ 30 ಪೈಸೆ ಏರಿಕೆ ಕಂಡು 102ರೂ ಗಡಿದಾಟಿದೆ. ಡಿಸೇಲ್ ಪ್ರತಿ ಲೀಟರ್ಗೆ 34-37 ಪೈಸೆ ಏರಿಕೆ ಕಂಡು 91.42ರೂಪಾಯಿ ತಲುಪಿದೆ.










