ತಮಿಳುನಾಡು : ಚಲಾವಣೆಯಲ್ಲಿ ಇಲ್ಲದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಡುವಂತೆ ದೃಷ್ಟಿಹೀನ ವ್ಯಕ್ತಿಯೊಬ್ಬರು ಕೃಷ್ಣಗಿರಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ಪಾವಕ್ಕಲ್ ಪಂಚಾಯತ್ ನ ಚಿನ್ನ ಕೌಂಟನೂರು ಗ್ರಾಮದ ಚಿನ್ನಕಣ್ಣು ಎಂಬಾತ ಭಿಕ್ಷೆ ಬೇಡುವ ಮೂಲಕ ಒಟ್ಟು 65,000 ರೂ. ಹಣ ಜೋಡಿಸಿದ್ದಾರಂತೆ. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಉಳಿತಾಯ ಮಾಡಿದ ಹಣವನ್ನು ಇಟ್ಟಿರುವ ಜಾಗದ ಬಗ್ಗೆ ಮರೆತು ಹೋಗಿದ್ದರು. ಈ ನಡುವೆ ನೋಟ್ ಬ್ಯಾನ್ ಆಗಿದ್ದು ಇದರ ಬಗ್ಗೆ ಅವರಿಗೆ ಅರಿವಿರಲಿಲ್ಲ. ಇದೀಗ ಹಣ ಸಿಕ್ಕಿದ್ದು, ಜೀವಿತಾವಧಿಯಿಂದ ಕಾಪಾಡಿಕೊಂಡು ಬಂದಿದ್ದ ಹಣವನ್ನು ವಿನಿಮಯ ಮಾಡಿಕೊಡುವಂತೆ ಬೇಡಿಕೊಂಡಿದ್ದಾರೆ.










