ಚಿಕ್ಕಮಗಳೂರು: 150 ಅಡಿ ಪ್ರಪಾತಕ್ಕೆ ಬಿದ್ದ ಕಾರು, ಓರ್ವ ಮಹಿಳೆ ಸ್ಥಳದಲ್ಲೇ ಸಾವು…

307
firstsuddi

ಚಿಕ್ಕಮಗಳೂರು: 150 ಅಡಿ ಪ್ರಪಾತಕ್ಕೆ ಕಾರು ಬಿದ್ದು ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಾಣಿಕ್ಯಧಾರ ಬಳಿ ನಡೆದಿದೆ. ಮಂಗಳೂರು ಮೂಲದ ಸಮೀರ ಭಾನು(35) ಮೃತ ಮಹಿಳೆ ಎನ್ನಲಾಗಿದ್ದು, ಮಂಗಳೂರಿನಿಂದ ಚಿಕ್ಕಮಗಳೂರಿಗೆ ಕುಟುಂಬ ಸಮೇತರಾಗಿ ಸಿಫ್ಟ್ ಕಾರಿನಲ್ಲಿ ಪ್ರವಾಸಕ್ಕೆ ಬಂದ ವೇಳೆ ಈ ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಅಬೂಬಕ್ಕರ್, ಬಾಸಿದ್, ಸಾಲ್ವಾ, ಆಯಿಷಾ, ಫಾತಿಮಾ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.